ಕಾಲು ಸ್ವಾಧೀನ ಕಳೆದುಕೊಂಡ ಮಹಿಳೆಗೆ ನೆರವು

05-GPT-2
ಗುಂಡ್ಲುಪೇಟೆ ತಾಲೂಕಿನ ಪಸಯ್ಯನಪುರ ಗ್ರಾಮದಲ್ಲಿ ಪಾರ್ಶ್ವವಾಯುವಿನಿಂದ ಕಾಲು ಸ್ವಾಧೀನ ಕಳೆದುಕೊಂಡ ಮಹಿಳೆಗೆ ಮುನೀರ್ ಪಾಷಾ ಪಡಿತರ ವಿತರಿಸಿದರು. ಸಿದ್ದರಾಜು, ಈಶ್ವರ್, ಅನ್ವರ್, ನಾಗರಾಜು ಇದ್ದರು.
Published on

ಮಾನವೀಯತೆ ಮೆರೆದ ಪೇಂಟರ್

ಗುಂಡ್ಲುಪೇಟೆ: ಪಾರ್ಶ್ವವಾಯುವಿನಿಂದ ಕಾಲು ಸ್ವಾಧೀನ ಕಳೆದುಕೊಂಡು ಜೀವನ ನಡೆಸಲು ಪರದಾಡುತ್ತಿರುವ ಮಹಿಳೆಗೆ ಪೇಂಟರ್ ಒಬ್ಬರು ಒಂದು ತಿಂಗಳಿಗೆ ಅಗತ್ಯವಾದ ಪಡಿತರ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.


ತಾಲೂಕಿನ ಪಸಯ್ಯನಪುರ ಗ್ರಾಮದ ರಾಜಮ್ಮ ಎಂಬುವರಿಗೆ ಪಾರ್ಶ್ವವಾಯುವಿನಿಂದ ಬಲಗಾಲು ಸ್ವಾಧೀನ ಕಳೆದುಕೊಂಡು ಸಹೋದರನ ನೆರವಿನಿಂದ ಜೀವನ ದೂಡುತ್ತಿದ್ದಾರೆ. ವಿದ್ಯುತ್ ಸಂಪರ್ಕವೂ ಇಲ್ಲದ ಮುರಿದು ಬೀಳುವಂತಿರುವ ಮನೆಯಲ್ಲಿ ವಾಸಿಸುತ್ತಿರುವ ಬಗ್ಗೆ ಮಾಹಿತಿ ತಿಳಿದ ವೃತ್ತಿಯಲ್ಲಿ ಪೇಂಟರ್ ಆಗಿರುವ ಕರುನಾಡ ಯುವಶಕ್ತಿ ಸಂಘಟನೆಯ ಅಧ್ಯಕ್ಷ ಮುನೀರ್ ಪಾಷಾ ತಮ್ಮ ಸ್ನೇಹಿತರೊಂದಿಗೆ ಗ್ರಾಮಕ್ಕೆ ತೆರಳಿ ಒಂದು ತಿಂಗಳಿಗೆ ಆಗುವಷ್ಟು ಪಡಿತರವನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಸಿದ್ದರಾಜು, ಈಶ್ವರ್, ಅನ್ವರ್, ನಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net