ಕಾಲು ಮುರಿದು ಹಾಸಿಗೆ ಹಿಡಿದ ಯುವಕ

IMG_20250628_093808
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;
Published on
*ಸಂಕಷ್ಟದಲ್ಲಿರುವ ಹೊಂಗನೂರು ಗ್ರಾಮದ ರಂಗಸ್ವಾಮಿ ಕುಟುಂಬ
*ಶಸ್ತ್ರ ಚಿಕಿತ್ಸೆಗೆ ಸಹಾಯಹಸ್ತ ಚಾಚಿರುವ ಕುಟುಂಬ 
ಚಾಮರಾಜನಗರ: ರಸ್ತೆ ಅಪಘಾತದಲ್ಲಿ ಮೂಳೆ ಮುರಿದು ಹಾಸಿಗೆ ಹಿಡಿದಿರುವ ಯುವಕನೊಬ್ಬನ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು, ಸಹಾಯ ಹಸ್ತ ಚಾಚಿದ್ದಾರೆ.
ತಾಲೂಕಿನ ಹೊಂಗನೂರು ಗ್ರಾಮದ ರಂಗಸ್ವಾಮಿ (28) ಎಂಬ ಯುವಕನಿಗೆ ವರ್ಷಗಳ ಹಿಂದೆ ರೇಚಂಬಳ್ಳಿ ಸಮೀಪ ಅಪಘಾತವಾಗಿ ಬಲಗಾಲಿನ ಮೂಳೆ ಮುರಿದಿತ್ತು. ಈ ವೇಳೆ ಶಸ್ತ್ರ ಚಿಕಿತ್ಸೆ ಮಾಡಿಸಿದ್ದು, ಯಾವುದೇ ರೀತಿಯಲ್ಲೂ ಗುಣವಾಗಿರಲಿಲ್ಲ. ಮನೆಗೆ ಆಧಾರವಾಗಿದ್ದ ಮಗನು ಕಾಲು ನೋವಿನಿಂದ ಹಾಸಿಗೆ ಹಿಡಿದ ಮೇಲೆ ಕುಟುಂಬ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ರಂಗಸ್ವಾಮಿ ಅವರ ಹಲವಾರು ಸ್ನೇಹಿತರು ಮತ್ತೊಮ್ಮೆ ಶಸ್ತ್ರ ಚಿಕಿತ್ಸೆ ಮಾಡಿಸಲು ನೆರವಾಗಿದ್ದರು. ಆದರೇ ಅದು ಫಲಕಾರಿಯಾಗದೇ, ಯುವಕ ರಂಗಸ್ವಾಮಿ ಸಂಪೂರ್ಣ ಹಾಸಿಗೆ ಹಿಡಿದಿದ್ದಾರೆ. ಇತ್ತೀಚೆಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಬಹುದು ಎಂದು ಹೇಳಿದ್ದು, ಶಸ್ತ್ರ ಚಿಕಿತ್ಸೆಗೆ ಸುಮಾರು 2-3 ಲಕ್ಷ ರೂ, ಹಣ ವೆಚ್ಚವಾಗಲಿದೆ. ಶಸ್ತ್ರ ಚಿಕಿತ್ಸೆಗೆ ಬೇಕಾದ ಹಣವನ್ನು ಹೊಂದಿಸಲಾಗದೇ ಕುಟುಂಬ ತುಂಬಾ ಸಂಕಷ್ಟದಲ್ಲಿದೆ. ಈ ವೇಳೆ ರಂಗಸ್ವಾಮಿ ಸ್ನೇಹಿತರು ಮತ್ತೆ ನೆರವಿಗೆ ಧಾವಿಸಿದ್ದಾರೆ. ಆದರೇ ಶಸ್ತ್ರ ಚಿಕಿತ್ಸೆಗೆ ಮತ್ತಷ್ಟು ನೆರವಿನ ಅಗತ್ಯವಿದ್ದು, ಕುಟುಂಬ ಸಹಾಯಹಸ್ತ ಚಾಚಿದೆ.
ತಂದೆಗೂ ಪಾರ್ಶ್ವವಾಯು: 
ಹೊಂಗನೂರಿನ ಯುವಕ ರಂಗಸ್ವಾಮಿ ಅವರ ತಂದೆ ನಾರಾಯಣಿ ಅವರು 1 ವರ್ಷದಿಂದ ಪಾರ್ಶ್ವವಾಯುಗೆ ತುತ್ತಾಗಿದ್ದಾರೆ. ತಾಯಿ ಲಕ್ಷ್ಮಮ್ಮ ಅವರು ಗಂಡ ಮತ್ತು ಮಗನನ್ನು ನೋಡಿಕೊಳ್ಳಬೇಕಾಗಿದೆ. ಯಾವುದೇ ಸ್ವಂತ ಮನೆ, ಜಮೀನು ಹಾಗೂ ದುಡಿಮೆಯ ಮಾರ್ಗವೂ ಇಲ್ಲದೇ ಬದುಕು ದೂಡುವುದೇ ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ಅವರು 2-3 ಲಕ್ಷ ರೂ, ಭರಿಸುವುದು ಕಷ್ಟವಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯವರು ಔಷಧಿಗಳನ್ನು ಬೇಕಾದರೇ ಉಚಿತವಾಗಿ ನೀಡುತ್ತೇವೆ ಎಂದು ಭರವಸೆ ನೀಡಿದ್ದು, ಶಸ್ತ್ರ ಚಿಕಿತ್ಸೆಯ ಹಣ ಕಟ್ಟಲೇ ಬೇಕಿದೆ ಎಂದು ಹೇಳಿದ್ದಾರೆ. ಎಷ್ಟು ಬೇಗ ಶಸ್ತ್ರ ಚಿಕಿತ್ಸೆ ಮಾಡಿಸುತ್ತಾರೋ ಅಷ್ಟು ಬೇಗ ಆತ ಗುಣವಾಗುತ್ತಾನೆ, ಇಲ್ಲ ಅಂದರೇ ಆತನ ಕಾಲನ್ನೇ ತೆಗೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ವೈದ್ಯರು ಹೇಳಿದ್ದಾರೆ.
ಸ್ನೇಹಿತರಿಂದ ಸಹಕಾರ:
ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ ಹಾಗೂ ರಂಗಸ್ವಾಮಿ ಅವರ ಸ್ನೇಹಿತರು ಸೇರಿ ಶಸ್ತ್ರ ಚಿಕಿತ್ಸೆ ಮಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮೊದಲ ಬಾರಿಯೂ ಸ್ನೇಹಿತರೇ ಒಂದಷ್ಟು ಸಹಾಯ ಮಾಡಿದ್ದರು. ಸ್ನೇಹಿತನ ನೋವಿನ ಪರಿಸ್ಥಿತಿಯನ್ನು ನೋಡಲಾಗದೇ, ಆತನ ಕುಟುಂಬದ ಸಂಕಷ್ಟವನ್ನು ನೋಡಲು ಸಾಧ್ಯವಾಗದೇ ಶಸ್ತ್ರ ಚಿಕಿತ್ಸೆ ಮಾಡಿಸಲು ಮುಂದಾಗಿದ್ದಾರೆ. ಆದರೇ ಶಸ್ತ್ರ ಚಿಕಿತ್ಸೆಗೆ ಬೇಕಾದ ಹಣದ ಕೊರತೆ ಉಂಟಾಗಿದೆ. ಹೇಗಾದರೂ ಮಾಡಿ ಆತನಿಗೆ ಶಸ್ತ್ರ ಚಿಕಿತ್ಸೆ ಮಾಡಿಸಬೇಕು. ಆತ ನಮ್ಮೊಂದಿಗೆ ನಡೆದಾಡುವಂತಾದರೇ ಸಾಕು ಎಂದು ಸ್ನೇಹಿತರು ಅಳಲು ತೋಡಿಕೊಂಡಿದ್ದಾರೆ. ಯಾರಾದರೂ ದಾನಿಗಳು ಸ್ನೇಹಿತನ ಕಷ್ಟಕ್ಕೆ ನೆರವಾಗಿ ಎಂದು ಮನವಿ ಮಾಡಿದ್ದಾರೆ. ನೆರವು ನೀಡುವವರು ರಂಗಸ್ವಾಮಿ ಗೆಳೆಯನ ಮೊಬೈಲ್ ಸಂ:70266 73457 ಗೆ ಸಂಪರ್ಕಿಸಬಹುದಾಗಿದೆ.
ನನ್ನ ಒಬ್ಬ ಮಗ ಮೃತಪಟ್ಟಿದ್ದಾನೆ, ಇದ್ದ ಇನ್ನೊಬ್ಬನ ಮಗನ ಪರಿಸ್ಥಿತಿ ಹೀಗಾಗಿದೆ. ಈ ವರೆಗೂ ಆತನ ಸ್ನೇಹಿತರೇ ಸಾಕಷ್ಟು ಸಹಾಯ ಮಾಡಿದ್ದಾರೆ. ಯಾರಾದರೂ ನನ್ನ ಮಗನ ಶಸ್ತ್ರ ಚಿಕಿತ್ಸೆಗೆ ನೆರವಾದರೇ ಸಾಕು. 
-ಲಕ್ಷ್ಮಮ್ಮ, ಯುವಕನ ತಾಯಿ, ಹೊಂಗನೂರು 
ರಂಗಸ್ವಾಮಿ ಅಪಘಾತಕ್ಕೆ ತುತ್ತಾದ ದಿನಗಳಿಂದ ಆತನ ಕುಟುಂಬ ತುಂಬಾ ಸಂಕಷ್ಟದಲ್ಲಿದೆ. ನಾವು ಸ್ನೇಹಿತರು ಹಲವರ ನೆರವನ್ನು ಕೇಳಿದ್ದೇವೆ. ನಾವು ಕೈಲಾದಷ್ಟು ಸಹಕಾರವನ್ನು ಮಾಡುತ್ತಿದ್ದೇವೆ. 
-ಯಶವಂತ್, ಸ್ನೇಹಿತ, ಹೊಂಗನೂರು 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net