

ಹುಮನಾಬಾದ್: ರೈತರು ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಂಡು, ಕಾಲು ಬಾಯಿ ಜ್ವರ ರೋಗ ನಿರ್ಮೂಲನೆ ಮಾಡಲು ಸಹಕರಿಸಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಹುಡಗಿ ಗ್ರಾಮದ ಕರಿಬಸವೇಶ್ವರ ಹಿರೇಮಠ ಸಂಸ್ಥಾನದಲ್ಲಿ ಮಂಗಳವಾರ ಪಶು ಇಲಾಖೆಯಿಂದ ಹಮ್ಮಿಕೊಂಡ ಜಾನುವಾರುಗಳ ಕಾಲು ಬಾಯಿ ರೋಗ ಲಸಿಕೆ ನೀಡುವ ರಾಷ್ಟಿಯ ಕಾರ್ಯಕ್ರಮಕ್ಕೆ ಹಸುಗಳಿಗೆ ಪೂಜೆ ಮಾಡಿ, ಚಾಲನೆ ನೀಡಿ ಮಾತನಾಡಿ, ಕಾಲು ಬಾಯಿ ರೋಗ ಬರದಂತೆ ಪಶು ಸಂಗೋಪನ ಇಲಾಖೆಯಿಂದ ಉಚಿತವಾಗಿ ನೀಡುತ್ತಿರುವ ಲಸಿಕೆ ಹಾಕಿಸಿ ಮುನ್ನೆಚ್ಚರಿಕೆ ವಹಿಸಬೇಕು. ಇಲಾಖೆ ಸಿಬ್ಬಂದಿ ಹೆಚ್ಚಿನ ಪ್ರಚಾರದ ಮೂಲಕ ರೈತರಿಗೆ ಮಾಹಿತಿ ನೀಡಬೇಕು ಎಂದರು.
ಹಿರೇಮಠ ಸಂಸ್ಥಾನದ ಶ್ರೀ ವಿರುಪಾಕ್ಷ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಸರ್ಕಾರದಿಂದ ಆಯೋಜನೆ ಮಾಡಿರುವ ಲಸಿಕಾ ಕಾರ್ಯಕ್ರಮ ಯಶಸ್ಸು ಮಾಡಲು ಎಲ್ಲರೂ ಕೈ ಜೋಡಿಸಬೇಕು ಎಂದರು.
ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಗೋವಿಂದ ಮಾತಮಾಡಿ, ಜಾನುವಾರುಗಳಿಗೆ ಬಾಧಿಸುವ ಮಾರಕ ವೈರಸ್ ರೋಗವಾಗಿದ್ದು, ರೈತರಿಗೆ ಆರ್ಥಿಕ ನಷ್ಟ ಉಂಟು ಮಾಡುತ್ತದೆ. ಆದ್ದರಿಂದ ಲಸಿಕೆಯೇ ರೋಗ ತಡೆಗಟ್ಟಲು ಇರುವ ಮಾರ್ಗ ಎಂದು ಹೇಳಿದರು.
ಸ್ಥಳೀಯ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಾಂತಕುಮಾರ ಸಿದ್ದೇಶ್ವರ ಪ್ರಾಸ್ತವಿಕ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಮ್ಮ ಎಚ್., ಉಪಾಧ್ಯಕ್ಷ ಬಾಬಾ ಸಿದ್ದಿಕ್, ಸದಸ್ಯರಾದ ರಾಜಶೇಖರ ಮಾಶೆಟ್ಟಿ, ಸಂಗಮನಾಥ ಮೇಳಶೆಟ್ಟಿ, ಆನಂದ ಸೈನಿರ್, ಪ್ರಮುಖರಾದ ಸೋಮನಾಥ ಪಾಟೀಲ್, ಮಲ್ಲಿಕಾರ್ಜುನ ಸೀಗಿ, ಡಿ.ಎನ್.ಪತ್ರಿ, ಕರೆಪ್ಪ ಮಲಶೆಟ್ಟಿ, ಮಲ್ಲಿಕಾರ್ಜುನ ಮೂಲಗಿ, ಘಾಳೆಪ್ಪ ಮಲಶೆಟ್ಟಿ, ಪ್ರಭು ರಾಜೇಶ್ವರ, ಧನರಾಜ ಗೋರ್ಟಾ, ಲಿಂಗರಾಜ ಮೇಳದೊಡ್ಡಿ, ಜ್ಞಾನದೇವ ಧುಮಾಳೆ, ಪಿಡಿಓ ಶಿವರಾಜ ಮಂಗಲಗಿ, ಶಿವಕುಮಾರ ಸಲಗಾರ, ರವಿ ಸ್ವಾಮಿ, ವಿನೋದ, ಅಭಿಷೇಕ, ಸುಮಲತಾ ಇತರರಿದ್ದರು.