ಕಾಲು ಜಾರಿ ಬಿದ್ದ ಕಾರ್ಮಿಕ

Published on

ಬಳ್ಳಾರಿ : ನಗರದ ರಾಯಲ್ ವೃತ್ತದಲ್ಲಿನ ನೂತನ ಕ್ಲಾಕ್ ಟವರ್ ಸುತ್ತಲಿನ ಕಟ್ಟಿಗೆಗಳನ್ನು ತೆರವುಗೊಳಿಸುವ ವೇಳೆ ಕಾರ್ಮಿಕನೊಬ್ಬ ಮೇಲಿಂದ ಜಾರಿ ಬಿದ್ದು ಕಾಲು ಮುರಿದುಕೊಂಡ ಘಟನೆ ಸೋಮವಾರ ನಡೆದಿದೆ.ಇಲ್ಲಿನ ಬಾಪುಜಿ ನಗರದ ನಿವಾಸಿ ವಿರೇಶ್ ಎಂಬುವ ಕ್ಲಾಕ್ ಟವರ್ ಸುತ್ತಲಿನ ಕಟ್ಟಿಗೆಗಳನ್ನು ತೆರವುಗೊಳಿಸುವ ವೇಳೆ ಆಯಾ ತಪ್ಪಿ ಬಿದಿದ್ದಾನೆ. ಚಿಕಿತ್ಸೆಗಾಗಿ ಟ್ರಾಮ್ ಕೇರ್‌ನಲ್ಲಿ ದಾಖಲಿಸಿದ್ದು, ಯಾವುದೇ ಅತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತು ಯಾವುದೆ ಪ್ರಕರಣ ದಾಖಲಾಗಿಲ್ಲ ಎಂದು ಗಾಂಧಿನಗರ ಪೊಲೀಸ್ ಠಾಣಾ ಸಿಪಿಐ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net