

ಯಳಂದೂರು : ತಾಲೂಕಿನ ಯರಿಯೂರು ಗ್ರಾಮದ ನಾಯಕ ಬಡಾವಣೆಯ ನಿವಾಸಿ ಶಿವರಾಜ ನಾಯಕ (48) ಎಂಬುವರು ಕಬಿನಿ ನಾಲೆಯಲ್ಲಿ ಕಾಲು ಜಾರಿ ಬಿದ್ದು, ಸಾವನಪ್ಪಿದ್ದಾರೆ.
ಕಟ್ಟಡ ಕೆಲಸ ನಿರ್ವಹಿಸಿ ಗುರುವಾರ ಮಧ್ಯಾಹ್ನ ಸಮಯದಲ್ಲಿ ಸಮೀಪದ ನಾಲೆಯ ಬಳಿಯಲ್ಲಿ ಕೈ-ಕಾಲು ತೊಳ್ಳೆದುಕೊಳ್ಳಲು ತೆರಳಿದ ಸಂದರ್ಭ ಜಾರಿ ಬಿದ್ದು ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು.