

ಕಲಬುರಗಿ: ಜಾಫರಾಬಾದ್ ಹತ್ತಿರದ ನಾಲ್ಕು ಎಕರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ೧೫ ಕೋಟಿ ರೂ. ವೆಚ್ಚದ ಹೈಟೆಕ್ ರೇಷ್ಮೆ ಮಾರುಕಟ್ಟೆ ಕಟ್ಟಡ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಮಂದಗತಿಯ ಕೆಲಸಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕಾಲಮಿತಿಯೊಳಗೆ ಮುಗಿಯದಿದ್ದರೆ ಗುತ್ತಿಗೆದಾರನಿಗೆ ದಂಡ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಲೋಕೋಪಯೋಗಿ ಇಲಾಖೆಯಿಂದ ನಡೆದಿರುವ ವಿವಿಧ ಸಿವಿಲ್ ಕಾಮಗಾರಿ ಸ್ಥಳಗಳಿಕ್ಕೆ ಡಿಸಿ ಸರಣಿ ಭೇಟಿ ನೀಡಿ ಸಿಲ್ಕ್ ಮಾರುಕಟ್ಟೆ ಕಾಮಗಾರಿಗೆ ವೇಗ ನೀಡುವಂತೆ ಅಧಿಕಾರಿ ಮತ್ತು ಗುತ್ತಿಗೆದಾರನಿಗೆ ಹೇಳಿದ ಅವರು, ಕೆಕೆಆರ್‌ಡಿಬಿ ಮತ್ತು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಡಿ ಕೇಂದ್ರ ಬಸ್ ನಿಲ್ದಾಣ ಬಳಿಯ ಕಣ್ಣಿ ಮಾರ್ಕೆಟ್ ಸ್ಥಳದಲ್ಲಿ ೨೮ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ತರಕಾರಿ ಮಾರುಕಟ್ಟೆ ಕಾಮಗಾರಿ ವೀಕ್ಷಿಸಿದರು. ಜನವರಿನಲ್ಲಿ ಮಾರುಕಟ್ಟೆ ಉದ್ಘಾಟನೆ ಮಾಡಬೇಕಿದ್ದರಿಂದ ತಕ್ಷಣ ಕೆಲಸ ಮುಗಿಸಿ ಲಾಟರಿ ಮೂಲಕ ಮಳಿಗೆ ಹಂಚಿಕೆ ಮಾಡಬೇಕು ಎಂದರು.
ಕೋಟನೂರ(ಡಿ) ಕೃಷಿ ತರಬೇತಿ ಕೇಂದ್ರ ಆವರಣದಲ್ಲಿ ೨.೬೦ ಕೋಟಿ ರೂ. ವೆಚ್ಚದ ಬೇಳೆಕಾಳು ಸಂಸ್ಕರಣೆ ಘಟಕ ಕಾಮಗಾರಿ ಪೂರ್ಣಗೊಂಡಿದ್ದರಿAದ ಕರ್ನಾಟಕ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಸುಭಾಷ್‌ಗೆ ಸೂಚನೆ ನೀಡಿದರು. ಎಇಇ ಎಸ್.ಎಸ್. ಪಟ್ಟಣಶೆಟ್ಟಿ ಇತರರಿದ್ದರು.
ಬಳಿಕ ಅಫಜಲಪುರಕ್ಕೆ ತೆರಳಿದ ಡಿಸಿ ೧೦ ಕೋಟಿ ರೂ. ವೆಚ್ಚದ ತಾಲೂಕು ಆಡಳಿತ ಸೌಧ ಕೆಲಸ ವೀಕ್ಷಿಸಿ ಮಾರ್ಚ್ ಅಂತ್ಯಕ್ಕೆ ಮುಗಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಿದರು. ಅಲ್ಲದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ೨ ಕೋಟಿ ವೆಚ್ಚದ ೧೫ ತರಗತಿ ಕೋಣೆ, ಒಂದು ಕೋಟಿ ರೂ. ವೆಚ್ಚದ ಶಿಕ್ಷಕರ ತರಬೇತಿ ಕೇಂದ್ರ ಕಟ್ಟಡ ಕಾಮಗಾರಿ, ೬ ಕೋಟಿ ವೆಚ್ಚದಲ್ಲಿ ಡಿಗ್ಗಿ ಕ್ರಾಸ್‌ನಿಂದ ಭೋಸಗಾ ಕ್ರಾಸ್‌ವರೆಗಿನ ರಸ್ತೆ ಸುಧಾರಣೆ ಕಾಮಗಾರಿ ಪರಿಶೀಲಿಸಿ ನವೆಂಬರ್ ಒಳಗೆ ಮುಗಿಸಲು ಸೂಚಿಸಿದರು.
ನಂತರ ಕರಜಗಿ ನಾಡ ತಹಸಿಲ್ ಕಚೇರಿಗೆ ಭೇಟಿ ನೀಡಿ ರೆಕಾರ್ಡ್ ರೂಮ್ ವೀಕ್ಷಿಸಿದರು. ತಹಸೀಲ್ದಾರ್ ಸಂಜೀವಕುಮಾರ ದಾಸರ್, ಲೊಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಲಕ್ಷಿö್ಮÃಕಾಂತ ಬಿರಾದಾರ್ ಇತರರಿದ್ದರು.