ಕಾಲಭೈರವೇಶ್ವರ ಸ್ವಾಮಿ ಜಯಂತಿ ಅದ್ದೂರಿ

Kalabhairava
Published on

ಚಿತ್ರದುರ್ಗ: ಐತಿಹಾಸಿಕ ಜೋಗಿಮಟ್ಟಿ ಗಾಳಿ ಗೋಪುರದ ಮಚ್ಚೇಂದ್ರನಾಥ ಗದ್ದುಗೆ ಬಳಿ ಕಾಲಭೈರವೇಶ್ವರ ಸ್ವಾಮಿಯ ಜಯಂತ್ಯುತ್ಸವ ಭಾನುವಾರ ಅದ್ದೂರಿಯಾಗಿ ಜರುಗಿತು.

ರುದ್ರಾಭಿಷೇಕ, ಹೋಮ ಸೇರಿ ವಿವಿಧ ಪೂಜಾ ಕಾರ್ಯಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಜೋಗಿ ಸಮುದಾಯ ಸ್ವಾಮಿಯನ್ನು ಶ್ರದ್ಧಾಭಕ್ತಿಯಿಂದ ಆರಾಧಿಸುವ ಮೂಲಕ ಜಯಂತಿ ಆಚರಿಸಿದರು.

ಯೋಗಿ ರಾಜಗುರು ಮಂಗಲನಾಥ್ ಶ್ರೀ ಮಾತನಾಡಿ, ರಾಜ್ಯದಲ್ಲಿ ಜೋಗಿ ಸಮುದಾಯವನ್ನು ರಾಜಕೀಯ, ಶೈಕ್ಷಣಿಕ ಕ್ಷೇತ್ರದಲ್ಲಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದೇನೆ. ಅದಕ್ಕೆ ಸಂಘಟನೆ ಅಗತ್ಯವಿದ್ದು, ನಿಮ್ಮೆಲ್ಲರ ಸಹಕಾರ ಬೇಕಿದೆ ಎಂದರು.

ಜೋಗಿ ಸಮಾಜದ ಜಿಲ್ಲಾಧ್ಯಕ್ಷ ಡಾ.ಕೆ.ಜಗದೀಶ್ ಮಾತನಾಡಿ, ಸಮಾಜ ಕಟ್ಟುವಲ್ಲಿ ನಾವು ವಿಫಲರಾಗಿದ್ದೇವೆ. ರಾಜಕೀಯ ಪ್ರಾತಿನಿಧ್ಯ ಇಲ್ಲ. ಒಂಬತ್ತು ವರ್ಷಗಳಿಂದ ಕಾಲಭೈರವೇಶ್ವರ ಸ್ವಾಮಿಯ ಜಯಂತಿ ಆಚರಿಸುತ್ತಿದ್ದೇವೆ. ಈವರೆಗೂ ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ಸಮುದಾಯಕ್ಕೆ ಒಂದು ಅಡಿ ಜಾಗ ನೀಡಿಲ್ಲ. ಕಡೇ ಪಕ್ಷ ಖಾಲಿ ನಿವೇಶನವನ್ನಾದರೂ ಕೊಡಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಾದ ಆಕಾಶ್, ಸಿಂಚನಾ, ಲಾವಣ್ಯಾ, ಯಮುನಾ, ರಶ್ಮಿತಾ, ನಾಡೋಜ ಪ್ರಶಸ್ತಿ ಪುರಸ್ಕೃತ ಗುಡ್ಡಪ್ಪ ಜೋಗಿ ಅವರನ್ನು ಸನ್ಮಾನಿಸಲಾಯಿತು.

ಶ್ರೀ ಸಾಗರನಾಥ್ ಮಹಾರಾಜ್, ಹಂಡಿ ಬಡಗನಾಥ್ ಶ್ರೀ, ಶ್ರೀ ನಿವೃತ್ತಿನಾಥ ಮಹಾರಾಜ್, ಶಂಭುನಾಥ ಶ್ರೀ, ಶ್ರೀ ರಾಜಗುರು ಕರ್ಜಗಿ, ಅಖಿಲ ಕರ್ನಾಟಕ ಜೋಗಿ ಸಮಾಜದ ರಾಜ್ಯಾಧ್ಯಕ್ಷ ಶಿವಾಜಿ ಮಧುಕರ್, ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ಪದಾಧಿಕಾರಿಗಳಾದ ಪ್ರತಾಪ್‌ಜೋಗಿ, ರಮೇಶ್, ಬಸವರಾಜ್, ಆನಂದಪ್ಪ, ಜೋಗಿ ಪ್ರಭು, ಪ್ರಸಾದ್, ಸುರೇಶ್‌ಬಾಬು, ಜಯಣ್ಣ, ವಿಶ್ವನಾಥ್, ಲತಾ ಗಿರೀಶ್, ಸಿದ್ದೇಶ್, ವಿಜಯಪ್ಪ, ಮಧು, ಶಶಿಧರ್, ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net