

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ನ್ಯೂ ಎಜ್ಯುಕೇಶನ್ ಸೊಸೈಟಿಯ ಆಡಳಿತ ಮಂಡಳಿಯ ನೂತನ ಕಾರ್ಯಾಧ್ಯಕ್ಷರಾಗಿ ರಾಜ್ಯಸಭಾ ಸದಸ್ಯೆ ಡಾ. ಸುಧಾ ಮೂರ್ತಿ ಆಯ್ಕೆಯಾದರು.
ಗುರುವಾರ ಕರೆದ ಸಂಸ್ಥೆಯ ತ್ರೖೆ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವ ಕಾರ್ಯದರ್ಶಿಯಾಗಿ ಎ.ಡಿ. ಕುಲಕರ್ಣಿ, ಆಡಳಿತ ಮಂಡಳಿಯ ಪದಾಧಿಕಾರಿಗಳಾಗಿ ಡಾ. ಸುನಂದಾ ಕುಲಕರ್ಣಿ, ಡಾ. ಗುರುರಾಜ ಕರ್ಜಗಿ, ರಾಜಾ ದೇಸಾಯಿ, ವಸಂತ ನಾಡಜೋಶಿ, ಮಹೇಂದ್ರ ಕೌತಾಳ, ಎಸ್.ಜಿ. ಯಾದಪ್ಪನವರ, ಎಸ್.ಜಿ. ದೇಸಾಯಿ ಆಯ್ಕೆಯಾದರು.
ಸಲಹಾ ಸಮಿತಿ ಸದಸ್ಯರಾಗಿ ಎ.ಬಿ. ಹರಪ್ಪನಹಳ್ಳಿ, ಸದಾನಂದ ಕಾಮತ, ಶ್ರೀನಿವಾಸ ದೇಸಾಯಿ, ಆರ್.ಕೆ. ದೇಸಾಯಿ, ಕಿರಣ ಪಾಟೀಲ ಕುಲಕರ್ಣಿ ಆಯ್ಕೆಯಾಗಿದ್ದಾರೆ.
ಅರುಣ ವೈದ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಚ್.ಜಿ. ಇನಾಂದಾರ, ಎಂ.ಎಂ. ಜೋಶಿ, ಡಾ. ಜಿ.ಎಚ್. ನರೇಗಲ್ಲ್, ವಿಜಯ ನಾಡಜೋಶಿ, ಲಕ್ಷ್ಮಣ ದಲಭಂಜನ್, ಧನಂಜನ ಕುಲಕರ್ಣಿ, ಇತರರು ಇದ್ದರು.