

ಚಿಕ್ಕೋಡಿ: ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಡೆದ ಜ್ಞಾನವನ್ನು ಮನದಟ್ಟು ಮಾಡಿಕೊಂಡು, ಪಿಜಿಸಿಇಟಿ ಮತ್ತು ಕೆ-ಮ್ಯಾಟ್ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದುಕೊಳ್ಳಿ ಎಂದು ಡಾ. ಪ್ರಸಾದ ರಾಂಪುರೆ ಸಲಹೆ ನೀಡಿದರು.
ಇಲ್ಲಿನ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಬುಧವಾರ ಎಂಬಿಎ ಮತ್ತು ಎಂಸಿಎ ವಿಭಾಗದ ವತಿಯಿಂದ ಪಿಜಿಸಿಇಟಿ ಮತ್ತು ಕೆ-ಮ್ಯಾಟ್ ಪರೀಕ್ಷೆಗೆ ೨ ದಿನಗಳ ಉಚಿತ ತರಬೇತಿ ಹಾಗೂ ಅಣುಕು ಪರೀಕ್ಷೆ ಜರುಗಿತು.
ಸಂಪನ್ಮೂಲ ವ್ಯಕ್ತಿ ಪಿಯುಶ್ ಶಾ ಅಪ್ಟಿಟ್ಯೂಡ್ ಮತ್ತು ಲಾಜಿಕಲ್ ರಿಜನಿಂಗ್ ಕುರಿತು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿರುವ ಪ್ರಶ್ನೆಗಳನ್ನು ಸರಳವಾಗಿ ಬಿಡಿಸುವುದನ್ನು ತಿಳಿಸಿದರು.
ಇಂಗ್ಲೀಷ್ ವ್ಯಾಕರಣ ಕುರಿತು ಪ್ರೋ.ಅನಿತಾ ಬಿರಾಜ ಹಾಗೂ ರಾಹುಲ ಪಾಟೀಲ, ಗಣಿತ ವಿಷಯವನ್ನು ಡಾ.ಸಚಿನ ಮೆಕ್ಕಳಕಿ, ಬೆಸಿಕ್ಸ್ ಆಫ್ ಕಂಪ್ಯೂಟರ್ ಕುರಿತು ಪ್ರೊ. ಸಂತೋಷ ಖೋತ, ಪ್ರೊ. ಶ್ರೇಯಾ ಕೆರಿಪಾಳೆ, ಪ್ರೊ. ಐಶ್ವರ್ಯ ವಂಟಮುತ್ತೆ, ಪ್ರೊ.ಜ್ಯೋತಿ ಕಾಗಲಕರ, ಪ್ರೊ. ರೋಹಿಣಿ ಪಾಟೀಲ ಉಪನ್ಯಾಸ ನೀಡಿದರು.
ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯ ೧೪೫ಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ.ಪ್ರವೀಣ ಪಾಟೀಲ, ಪ್ರೊ.ಸರಸ್ವತಿ ಕುರಣಿ, ಪ್ರೊ.ಆನಂದ ಮಿರ್ಜಿ, ಪ್ರೊ.ಆನಂದ ಹಿರೇಮಠ, ಪ್ರೊ. ಅನಿಷಾ ಪಾಂಡಾ, ಪ್ರೊ. ಕೀರ್ತಿ ಪಾಟೀಲ, ಪ್ರಸಾದ ಗುಜ್ಜರ ಇತರರಿದ್ದರು. ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಸಂಜಯ ಹನಗಂಡಿ ಸ್ವಾಗತಿಸಿದರು. ಕೀರ್ತಿ ಪಾಟೀಲ ನಿರೂಪಿಸಿದರು. ಎಂಸಿಎ ವಿಭಾಗ ಮುಖ್ಯಸ್ಥ ಪ್ರೊ. ಸುನೀಲ ಶಿಂಧೆ ವಂದಿಸಿದರು.