ಕಾರ್ಯಾಗಾರಕ್ಕೆ ಅಪರ ಜಿಲ್ಲಾಧಿಕಾರಿ ಚಾಲನೆ

Dr Shankar Vanikyal (asst commissioner)
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಆಡಳಿತ ತರಬೇತಿ ಸಂಸ್ಥೆ ಮೈಸೂರು, ಇ-ಆಡಳಿತ ಕೇಂದ್ರ ಬೆಂಗಳೂರು ಹಾಗೂ ಕಲಬುರಗಿಯ ಜಿಲ್ಲಾ ತರಬೇತಿ ಸಂಸ್ಥೆ ಸಹಯೋಗದೊಂದಿಗೆ ಕೇಂದ್ರ ಸರ್ಕಾ ರದ ಎನ್.ಇ.ಜಿ.ಡಿ. ಸಾಮಥ್ರ್ಯಭಿವೃದ್ಧಿ ಯೋಜನೆಯಡಿ ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ಕುರಿತು ಕಲಬುರಗಿ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ಎ ವೃಂದದ ಅಧಿಕಾರಿಗಳಿಗೆ ವಿಶೇಷ ಕಾರ್ಯಾಗಾರ ಶನಿವಾರ ಆಯೋಜಿಸಲಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ, ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳು ಕಚೇರಿಯ ಗಣಕಯಂತ್ರ ಮತ್ತು ಮೊಬೈಲ್ಗಳಲ್ಲಿ ಅಂತರಜಾಲ ಬಳಕೆಯ ಉಪಯೋಗ ಮತ್ತು ಆಗಬಹುದಾದ ಅನನುಕೂಲತೆಗಳ ಬಗ್ಗೆ ಜಾಗೃತಿವಹಿಸಬೇಕು. ಸೈಬರ್ ಕ್ರೈಮ್ ಕುರಿತು ಹಲವಾರು ಉದಾಹರಣೆ ನೀಡುವ ಮೂಲಕ ಹಿಂದಿನ, ಇಂದಿನ ಭದ್ರತೆ ಹಾಗೂ ಇಂದಿನ ದಿನದಲ್ಲಿ ಇ-ಆಡಳಿತದ ಪ್ರಾಮುಖ್ಯತೆ ಕುರಿತು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕಲಬುರಗಿ ಪೊಲೀಸ್ ತರಬೇತಿ ಸಂಸ್ಥೆಯ ಸಾಫ್ಟ್ವೇರ್ ಇಂಜನಿಯರ್ ವಿವೇಕ ಹೊನಗುಂಟಿಕರ ಸೈಬರ್ ಸೆಕ್ಯೂರಿಟಿ ವಿಷಯ ಕುರಿತು, ಕಲಬುರಗಿ ಪಿಡಿಎ ಇಂಜನಿಯರಿಂಗ್ ಕಾಲೇಜಿನ ಗಣಕಯಂತ್ರ ವಿಭಾಗದ ಮುಖ್ಯಸ್ಥೆ ಡಾ. ಸುವರ್ಣ ನಂದ್ಯಾಳ ಇ-ಆಡಳಿತ ಕುರಿತು ಉಪನ್ಯಾಸ ನೀಡಿದರು.
ಜಿಲ್ಲೆಯ ವಿವಿಧ ಇಲಾಖೆಗಳ ಎ ವೃಂದದ ಅಧಿಕಾರಿಗಳು, ಇ-ಆಡಳಿತ ಮತ್ತು ದತ್ತಾಂಶ ವಿಶ್ಲೇಷಣಾ ಕೇಂದ್ರದ ಹಿರಿಯ ಬೋಧಕ ಕವಿತಾ ಎಂ., ಸುರೇಶ್ ತೊನಸಳ್ಳಿಕರ್ ಸೇರಿದಂತೆ ತರಬೇತಿ ಸಂಸ್ಥೆಯ ಉಪ ಪ್ರಾಚಾರ್ಯರು ಹಾಗೂ ಕಿರಿಯ ಬೋಧಕ ಶಿವರಾಜ ಉಪಸ್ಥಿತರಿದ್ದರು.
ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಅಂಬೋಜಿ ನಾಯ್ಕೋಡಿ ಸ್ವಾಗತಿಸಿದರು. ನರಸಿಂಹರಾವ್ ವಂದಿಸಿದರು. ಶಿವಪ್ರಭು ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net