ಕಾರ್ಯರೂಪಕ್ಕೆ ಬಾರದ ಗರೀಬಿ ಹಠಾವೊ ಪರಿಕಲ್ಪನೆ

17kglphoto-1.,,., (1)
ಕೊಳ್ಳೇಗಾಲದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್. ಭಾಸ್ಕರ್ ಮಾಲಾರ್ಪಣೆ ಮಾಡಿದರು. ಮಹಮ್ಮದ್ ತಸ್ಕೀನ್, ಮಹಮ್ಮದ್ ರಿಜ್ವಾನ್, ಜಾಕೀರ್ ಪಾಷ, ಜುನೈದ್, ಮುಜಮಿಲ್, ಇಮ್ರಾನ್ ಟಿಪ್ಪು, ಜಯಮೇರಿ, ಆಯಾಜ್ ಇದ್ದರು.
Published on

ಕೊಳ್ಳೇಗಾಲ: ಸ್ವಾತಂತ್ರೃ ಬಂದು 75 ವರ್ಷ ಕಳೆದರೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಗರೀಬಿ ಹಠಾವೊ ಪರಿಕಲ್ಪನೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ಭಾಸ್ಕರ್ ಪ್ರಸಾದ್ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಶುಕ್ರವಾರ ರಾತ್ರಿ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ಸ್ವಾಗತಿಸುತ್ತೇನೆ. ಆದರೆ ಅಕ್ಕಿ, 2 ಸಾವಿರ ಹಣಕ್ಕೆ ಯುವಕರು ಕೈಕಟ್ಟಿ ನಿಲ್ಲುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ದೇಶವನ್ನು ಹಲವು ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಈವರೆಗೆ ಏನು ಮಾಡಿದೆ. ಜನರು ಈಗಲೂ ಉಚಿತ ಅಕ್ಕಿಗಾಗಿ ಕ್ಯೂ ನಿಲ್ಲುವ ಪರಿಸ್ಥಿಗೆ ಯಾರು ಕಾರಣ ಎಂದು ವಾಗ್ದಾಳಿ ನಡೆಸಿದರು.

ವಿದ್ಯುತ್ ಗುತ್ತಿಗೆದಾರರ ಸಂಘದ ನಿರ್ದೇಶಕ ಮಹಮ್ಮದ್ ತಸ್ಕೀನ್, ಎಸ್‌ಡಿಪಿಐ ತಾಲೂಕು ಅಧ್ಯಕ್ಷ ಮಹಮ್ಮದ್ ರಿಜ್ವಾನ್, ಉಪಾಧ್ಯಕ್ಷ ಜಾಕೀರ್ ಪಾಷ, ಕಾರ್ಯದರ್ಶಿ ಜುನೈದ್, ತಾಲೂಕು ಸಮಿತಿ ಸದಸ್ಯ ಮುಜಮಿಲ್, ಸಂಘಟನಾ ಕಾರ್ಯದರ್ಶಿ ಇಮ್ರಾನ್ ಟಿಪ್ಪು, ನಗರಸಭೆ ಸದಸ್ಯ ಜಯಮೇರಿ, ಕರ್ನಾಟಕ ರಕ್ಷಣಾ ವೇದಿಕೆ( ಪ್ರವೀಣ್ ಶೆಟ್ಟಿ ಬಣ್ಣ) ಕಾರ್ಯಾಧ್ಯಕ್ಷ ಆಯಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net