

ಗೋಣಿಕೊಪ್ಪ: ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ಕಿರಿಯ ಶೂಟರ್ ಬಹುಮಾನವನ್ನು ಕಳ್ಳಿಚಂಡ ಧೃವ್ ಕಾರ್ಯಪ್ಪ, ಹಿರಿಯ ಶೂಟರ್ ಬಹುಮಾನವನ್ನು ಕೋದಂಡ ಸುಬ್ಬಯ್ಯ ಪಡೆದುಕೊಂಡರು.
450ಕ್ಕೂ ಹೆಚ್ಚು ಸ್ಪರ್ಧಿಗಳು ಮೂರು ವಿಭಾಗಗಳಿಗೆ ಸ್ಪರ್ಧೆ ನಡೆಸಿದರು. 0.22 ವಿಭಾಗದಲ್ಲಿ ಪುತ್ತರೀರ ನಂಜಪ್ಪ (ಪ್ರ), ಬಟ್ಟೀರ ಕರಣ್ (ದ್ವಿ), ಸಿಜು (ತೃ), 12ನೇ ಬೋರ್ ವಿಭಾಗದಲ್ಲಿ ಕನ್ನಿಕಂಡ ಶ್ಯಾಂ (ಪ್ರ), ಬ್ರಿಜೇಶ್ (ದ್ವಿ), ಶರೀನ್ ಗಣಪತಿ (ತೃ), ಏರ್‌ಗನ್‌ನಲ್ಲಿ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ರಿಶಾಂಕ್ ನಂಜಪ್ಪ (ಪ್ರ), ಚಿಯಕ್‌ಪೂವಂಡ ಚೇತನ್ (ದ್ವಿ), ಅಪ್ಪುಮಣಿಯಂಡ ಭಜನ್ ತೃತೀಯ ಸ್ಥಾನ ಪಡೆದುಕೊಂಡರು. ಹಿರಿಯ ಶೂಟರ್ ಬಹುಮಾನವನ್ನು ಕೋದಂಡ ಸುಬ್ಬಯ್ಯ, ಕಿರಿಯ ಶೂಟರ್ ಬಹುಮಾನವನ್ನು ಕಳ್ಳಿಚಂಡ ಧೃವ್ ಕಾರ್ಯಪ್ಪ, ಬೆಸ್ಟ್ ಶೂಟರ್ ಬಹುಮಾನವನ್ನು ಆಲೆಮಾಡ ಬೋಪಣ್ಣ ಹಾಗೂ ಪುಗ್ಗೇರ ದೇವ್ ಬೋಪಣ್ಣ ಪಡೆದುಕೊಂಡರು.
ಕಾಫಿ ಬೆಳೆಗಾರ ಅಪ್ಪನೆರವಂಡ ನಿಶಾಂತ್ ಅಪ್ಪಾಜಿ, ಸಣ್ಣುವಂಡ ಸರೋಜ ಕಾವೇರಪ್ಪ, ಚೆಪ್ಪುಡೀರ ಮಾಯಾ ತಿಮ್ಮಯ್ಯ, ಸಣ್ಣುವಂಡ ದಿಲಿಪ್ ಸೋಮಣ್ಣ, ಚೆಪ್ಪುಡೀರ ಕುಶಾಲಪ್ಪ, ಸ್ಥಳೀಯ ಇಂಡಿಯಾ ಗ್ಯಾರೇಜ್ ವ್ಯವಸ್ಥಾಪಕ ತೀತಿರ ಸುಬ್ಬಯ್ಯ, ಸಮಿತಿ ಅಧ್ಯಕ್ಷ ಸಣ್ಣುವಂಡ ವಿನು ವಿಶ್ವನಾಥ್ ಬಹುಮಾನ ವಿತರಿಸಿದರು.