ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿ

SEP 19-HRP-02
Published on

ಹರಪನಹಳ್ಳಿ: ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ.7ರಂದು ಅದ್ದೂರಿಯಾಗಿ ಆಚರಿಸಲು ಸಮುದಾಯದ ಪ್ರಮುಖರ ಸಹಕಾರ ಅಗತ್ಯ ಎಂದು ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬು ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು. ಅಂದು ಬೆಳಗ್ಗೆ 9 ಗಂಟೆಗೆ ಪಟ್ಟಣದ ಐಬಿ ವೃತ್ತದಿಂದ ಹಿರೆಕೆರೆ ವೃತ್ತದವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಯಲಿದೆ. 11 ಗಂಟೆಗೆ ನಟರಾಜ ಕಲಾ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ನಡೆಯಲಿದೆ. ಮಹರ್ಷಿ ವಾಲ್ಮೀಕಿ ಕುರಿತು ವಿಶೇಷ ಉಪನ್ಯಾಸ ನೀಡಲಾಗುತ್ತದೆ ಎಂದರು.

ಪ್ರಮುಖರಾದ ಎಚ್.ಕೆ.ಹಾಲೇಶ, ವಾಗೀಶ್, ಚಿಕ್ಕೇರಿ ಬಸಪ್ಪ, ಚಿರಸ್ತಹಳ್ಳಿ ಮರಿಯಪ್ಪ, ಸುರೇಶ್ ಮಂಡಕ್ಕಿ, ಎಚ್.ಕೆ.ಮಂಜುನಾಥ, ಕರಿಯಪ್ಪ ಕಿತ್ತೂರು ಓಬಣ್ಣ, ನಿಚ್ವನಹಳ್ಳಿ ಭೀಮಪ್ಪ, ಮೈಲಪ್ಪ, ತೆಲಿಗಿ ಅಂಜಿನಪ್ಪ, ಶಿವಣ್ಣ, ರೇವಣಸಿದ್ದಪ್ಪ, ಪಿ.ಪರಶುರಾಮ, ಗುಂಡಿ ಮಂಜುನಾಥ, ಶೋಭಾ, ಮಂಜುಳಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net