

ಕೊಳ್ಳೇಗಾಲ: ಪಟ್ಟಣದ ಭೀಮನಗರದ ಬಡಾವಣೆಯ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಕ್ಕೆ ಭಾನುವಾರ ಐವರು ಚುನಾಯಿತರಾಗಿ ಆಯ್ಕೆಗೊಂಡಿದ್ದರು.
ಪಟ್ಟಣದ ಎಸ್‌ಡಿಎ ಶಾಲೆ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಭಾನುವಾರ ಚುನಾವಣಾಧಿಕಾರಿ ನಾಗೇಶ್ ಅವರ ನೇತೃತ್ವದಲ್ಲಿ ಬೆಳಗ್ಗೆ 10 ರಿಂದ 3 ಗಂಟೆಯವರೆಗೆ ಚುನಾವಣೆ ನಡೆಯಿತು. ನಂತರ ಮತದಾನ ಎಣಿಕೆ ನಡೆದ ಬಳಿಕ ಚುನಾವಣಾಧಿಕಾರಿ ಫಲಿತಾಂಶವನ್ನು ಘೋಷಣೆ ಮಾಡಿದ್ದು. ಅಧಕ್ಷರಾಗಿ ಎಸ್.ಆನಂದಮೂರ್ತಿ, ಉಪಾಧ್ಯಕ್ಷರಾಗಿ ಎಸ್.ಕಿರಣ್, ಕಾರ್ಯದರ್ಶಿಯಾಗಿ ಎಂ. ಪಾಪಣ್ಣ, ಸಹ ಕಾರ್ಯದರ್ಶಿಯಾಗಿ ಶಶಿಧರ್ ಹಾಗೂ ಖಜಾಂಚಿಯಾಗಿ ಕೆ.ರಾಜೇಶ್ ಆಯ್ಕೆಯಾದರು.
ಚುನಾವಣೆ ಬಳಿಕೆ ಜಯಶೀಲರಾದ ಅಭ್ಯರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಮಾಲಾರ್ಪಣೆ ಮಾಡಿದರು. ಈ ವೇಳೆ ಭೀಮನಗರದ ಹಾಲಿ ಯಜಮಾನರು, ಮಾಜಿ ಯಜಮಾನರು, ಮುಖಂಡರು ಹಾಗೂ ಯುವಕರು ಸಂಘದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಅಭಿನಂದಿಸಿದರು.
ಅಭ್ಯರ್ಥಿಯ ಅನುಪಸ್ಥಿತಿಯಲ್ಲಿ ಗೆಲುವು: ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್.ಆನಂದ ಮೂರ್ತಿ ಅವರು ವಿದೇಶದಲ್ಲಿದ್ದರು. ಅವರ ಅನುಪಸ್ಥಿತಿಯಲ್ಲಿ ಅವರ ಬೆಂಬಲಿಗರು ಹಾಗೂ ಮತದಾರರು ಒಗ್ಗಟ್ಟಾಗಿ ಶ್ರಮಿಸಿ ಅಧಿಕ ಮತಗಳನ್ನು ನೀಡಿ ಗೆಲುವು ನೀಡಿದ್ದಾರೆ.