ಕಾರ್ಯಕರ್ತರೇ ಬಿಜೆಪಿ ಜೀವಾಳ

Kherda
Published on

ಬೀದರ್: ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು, ಸಂವಿಧಾನದ ಆಶಯಗಳಂತೆ ಕೆಲಸ ಮಾಡುತ್ತದೆ. ಉತ್ತಮ ತತ್ವ ಸಿದ್ಧಾಂತಗಳನ್ನು ಹೊಂದಿರುವುದರಿಂದ ಜನಮೆಚ್ಚುಗೆ ಗಳಿಸಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದರು.

ಔರಾದ್ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಕಾರ್ಯಕರ್ತರನ್ನು ಭೇಟಿಯಾಗಿ ಪಕ್ಷ ಸಂಘಟನೆಯ ಕುರಿತು ಸಮಾಲೋಚನೆ ನಡೆಸಿ ಮಾತನಾಡಿ, ನಾಡಿನ ಅಭಿವೃದ್ಧಿ, ರಾಷ್ಟ್ರೀಯ ಭದ್ರತೆ, ಸಾಮಾಜಿಕ ಸಾಮರಸ್ಯ, ಅಂತ್ಯೋದಯ, ರಾಷ್ಟ್ರೀಯತೆ, ರೈತರ ಏಳಿಗೆಯಂಥ ಜನಪರ ವಿಷಯಗಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ಬಿಜೆಪಿ ನೇತೃತ್ವದ ಸರ್ಕಾರ ವಹಿಸುತ್ತದೆ ಎಂದರು.

ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಹೆಚ್ಚು ಗೌರವ ಇದ್ದು, ಅವರೇ ಪಕ್ಷದ ಜೀವಾಳವಾಗಿದ್ದಾರೆ. ಎಲ್ಲರ ಸಲಹೆಗಳನ್ನು ಪರಿಗಣಿಸುವ ಏಕೈಕ ಪಕ್ಷ ಬಿಜೆಪಿಯಾಗಿದೆ. ಇಲ್ಲಿ ಸಾಮಾನ್ಯ ಕಾರ್ಯಕರ್ತನೂ ನಾಯಕನಾಗಲು ಸಾಧ್ಯವಿದೆ ಎಂದು ತಿಳಿಸಿದರು.

ಗ್ರಾಮಗಳಲ್ಲಿರುವ ಪಕ್ಷ ಸಂಘಟನೆಯ ಬಗ್ಗೆ ಪಕ್ಷದ ಪದಾಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಖೇರ್ಡಾ, ಭೀಮರಾವ್ ತಾಂಡಾ, ಡೊಂಗರಗಾಂವ, ಹುಲ್ಯಾಳ, ಏಕಂಬಾ, ಜಮಾಲಪುರ, ಖಂಡೆಕೇರಿ, ಭೀಮಲಾ ತಾಂಡಾ, ಕೇವಳಾ ತಾಂಡಾ, ಹಸ್ಸಿಕೇರಾ, ರಾಮಜಿ ತಾಂಡಾ, ಥಾವರನಾಯಕ್ ತಾಂಡಾ, ಬೆಂಬ್ರಾ, ಲಕ್ಷ್ಮೀ ನಗರ, ಬೇಡಕುಂದಾ, ಕೋರೆಕಲ್, ಗೌಂಡಗಾಂವ್, ಭವಾನಿ ನಗರ ತಾಂಡಾ, ಕಿಶನ ನಾಯಕ ತಾಂಡಾ, ಘಮಾ ತಾಂಡಾ, ಹರಿ ತಾಂಡಾ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂಚರಿಸಿದರು.

ಮುಖಂಡರಾದ ವಸಂತ ಬಿರಾದಾರ್, ರಾಮಶೆಟ್ಟಿ ಪನ್ನಾಳೆ, ರಾಜಕುಮಾರ ಪೋಕಲವಾರ್, ಶಿವಾಜಿರಾವ ಪಾಟೀಲ್ ಮುಂಗನಾಳ, ಕೇರಬಾ ಪವಾರ, ಸಂತೋಷ ಪೋಕಲವಾರ್, ಮಾರುತಿ ವಾಡೇಕರ್, ಹಣಮಂತ ಸುರನಾರ, ಸಚಿನ್ ಬಿರಾದಾರ್, ಬಾಪುರಾವ್ ರಾಠೋಡ್, ಗಂಗಾಧರ ರಾಠೋಡ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net