ಕಾರ್ಯ ಮರೆತ ಪತ್ರಕರ್ತ ಅಪಾಯಕಾರಿ

klb1
ಚಿತ್ತಾಪುರದಲ್ಲಿ ಮಂಗಳವಾರ ಹಮ್ಮಿಕೊಂಡ ಪತ್ರಿಕಾ ದಿನಾಚರಣೆಯಲ್ಲಿ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಾಗರಡ್ಡಿ ಪಾಟೀಲ್ ಕರದಾಳ, ಶಿವಸುಂದರ, ಡಾ.ಸುನೀತಾ ಪಾಟೀಲ್, ಭೀಮಣ್ಣ ಸಾಲಿ, ಶಂಕರಗೌಡ ಪಾಟೀಲ್ ಇದ್ದರು.
Published on

ಚಿತ್ತಾಪುರ: ಪತ್ರಕರ್ತರಲ್ಲಿ ಕಾರ್ಯನಿರತರು, ಕಾರ್ಯಮರೆತವರು ಎಮಬ ಎರಡು ಭಾಗಗಳಿದ್ದು, ಕಾರ್ಯ ಮರೆತವರು ದೇಶಕ್ಕೆ ಅಪಾಯಕಾರಿ ಎಂದು ಲೇಖಕ, ಪ್ರಗತಿಪರ ಚಿಂತಕ ಶಿವಸುಂದರ ಬೆಂಗಳೂರು ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿ, ಪತ್ರಕರ್ತರಿಮದ ಸಮೃದ್ಧ ದೇಶ ಕಟ್ಟಲು ಸಾಧ್ಯ. ಪತ್ರಕರ್ತ ಸತ್ಯಾಂಶ ಅರಿತು ವರದಿ ಮಾಡಬೇಕು. ಪ್ರತಿ ಪಕ್ಷ, ಆಡಳಿತ ಪಕ್ಷದ ಹೇಳಿಕೆ ಬರೆದರೆ ಪತ್ರಕರ್ತರ ಜವಾಬ್ದಾರಿ ಮುಗಿಯಲ್ಲ, ಮನಸ್ಸಿನ ಕಿಟಕಿ ತೆರೆದು ಸತ್ಯವನ್ನು ಅನಾವರಣಗೊಳಿಸಬೇಕು ಎಂದರು.
ಶಿಕ್ಷಣ ಪ್ರೇಮಿ ನಾಗರೆಡ್ಡಿ ಪಾಟೀಲ್ ಕರದಾಳ ಮಾತನಾಡಿ, ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಪತ್ರಕರ್ತರು ಸೇರಿ ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯನಿರತರಾದಾಗ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ ಎಂದರು.

ಶರಣಬಸವೇಶ್ವರ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಸುನಿತಾ ಪಾಟೀಲ್ ಮಾತನಾಡಿ, ಧ್ವನಿ ಇಲ್ಲದವರಿಗೆ ಧ್ವನಿಯಾಗಿದ್ದ ಪತ್ರಿಕಾ ರಂಗಕ್ಕೆ ಗ್ರಾಮೀಣ ಪತ್ರಕರ್ತರ ಕೊಡುಗೆ ಅಪಾರ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ, ಡಿವೈಎಸ್ಪಿ ಶಂಕರಗೌಡ ಪಾಟೀಲ್, ತಾಲೂಕು ಅಧ್ಯಕ್ಷ ಸಿದ್ದರಾಜು ಮಲಕಂಡಿ ಮಾತನಾಡಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ಜಿಲ್ಲಾ ಪತ್ರಕರ್ತರ ಪ್ರಶಸ್ತಿ ಪುರಸ್ಕೃತ ರವಿಶಂಕರ ಬುರ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಭೀಮಣ್ಣ ಸಾಲಿ, ಬಿಜೆಪಿ ತಾಲೂಕಾಧ್ಯಕ್ಷ ರವೀದ್ರ ಸಜ್ಜನಶೆಟ್ಟಿ, ಸಂಘದ ರಾಜ್ಯ ಕಾರ್ಯಕಾರಿÀಣಿ ಸಮಿತಿ ಸದಸ್ಯ ಡಾ.ಶಿವರಂಜನ್ ಸತ್ಯಂಪೇಟ, ತಾಪಂ ಇಒ ನೀಲಗಂಗಾ ಬಬಲಾದ್, ಪ್ರಮುಖರಾದ ಶಶಿಧರ ಬಿರಾದಾರ, ಮನೋಜಕುಮಾರ ಗುರಿಕಾರ, ಸಿ.ಫಕ್ರುದ್ದೀನ್, ಪಂಡಿತ್ ಸಿಂಧೆ, ಪತ್ರಕರ್ತರಾದ ವೀರೇಂದ್ರ ಕೊಲ್ಲೂರ, ಮಲ್ಲಿಕಾರ್ಜುನ ಮುಡಬೂಳಕರ್, ಸಂತೋಷ ಕಟ್ಟಿಮನಿ, ಮಡಿವಾಳಪ್ಪ ಹೇರೂರ, ಕಾಶಿನಾಥ ಗುತ್ತೇದಾರ, ಮಹ್ಮದ್ ಮಶಾಖ, ರಾಯಪ್ಪ ಕೋಟಗಾರ, ಪೃಥ್ವಿ ಸಾಗರ, ಜಗದೇವ ಕುಂಬಾರ, ಅನಂತನಾಗ ದೇಶಪಾಂಡೆ, ದಯಾನಂದ ಖಜೂರಿ, ಚಂದ್ರಶೇಖರ ಬಳ್ಳಾ, ಅಲ್ಲಾಬಕಾಶ, ಡಾ.ಸಾಯಬಣ್ಣ ಗುಡುಬಾ ಇತರರಿದ್ದರು. ವಿಕ್ರಮ ನಿಂಬರ್ಗಾ ನಿರೂಪಣೆ ಮಾಡಿದರು. ಜಗದೇವ ದಿಗ್ಗಾವಂಕರ್ ಸ್ವಾಗತಿಸಿದರು. ನಾಗಯ್ಯಸ್ವಾಮಿ ಅಲ್ಲೂರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net