

ಬಾಗಲಕೋಟೆ: ದುಡಿಮೆ ಮೂಲಕವೇ ಬದುಕು ಕಟ್ಟಿಕೊಂಡಿರುವ ಕಾರ್ಮಿಕರು ಸಂಘಟಿರಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ನ್ಯಾಯಾಧೀಶ ದ್ಯಾವಪ್ಪ ಎಸ್.ಬಿ ಹೇಳಿದರು.
ನಗರದ ಅಂಬಾ ಭವಾನಿ ದೇವಸ್ಥಾನದ ಸಭಾಭವನದಲ್ಲಿ ಗುರುವಾರ ಟೇಲರ ಅಸೋಸಿಯೇಷನ, ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಅಸಂಘಟಿತ ಕಾರ್ಮಿಕರಿಗೆ ಇರುವ ಸೌಲಭ್ಯಗಳ ಕುರಿತು ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಸಂಘಟಿತ ಕಾರ್ಮಿಕರ ವರ್ಗವು ಸರ್ಕಾರ ಕಾರ್ಮಿಕ ಇಲಾಖೆ ನೀಡುವ ಸೌಲಭ್ಯಗಳ ಕುರಿತು ಸಂಪೂರ್ಣ ಮಾಹಿತಿ ಹೊಂದಿರಬೇಕು. ತಮಗೆ, ಮಕ್ಕಳ ಶಿಕ್ಷಣಕ್ಕೆ ಅನೇಕ ಯೋಜನೆಗಳು ಇದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಮಿಕ ಅಧಿಕಾರಿ ಅನೀಲ ಭಶಟ್ಟಿ ಮಾತನಾಡಿ, ಕಾರ್ಮಿಕರಿಗೆ ಕಾರ್ಮಿಕ ಕಾರ್ಡ, ಇ ಶ್ರಮ ಕಾರ್ಡ್ ನೀಡಲಾಗುತ್ತಿದೆ. ಪ್ರತಿಯೊಬ್ಬ ಕಾರ್ಮಿಕರು ಇದನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಟೇಲರ ಅಸೋಸಿಯೇಷನ ಅಧ್ಯಕ್ಷ ವಿಜಯ ಸುಲಾಖೆ, ಪದಾಽಕಾರಿಗಳು ರಾಜು ಪಾಟೀಲ, ಹಿರಾಲಾಲ ಅಷ್ಟಕರ, ಶ್ರೀಶೈಲ ಗೌಡರ, ಯಮನೂರಿ ಕಮಿತಕರ, ದಶರತ ಪತಂಗೆ, ಜಾವಿದ ಆರಿ, ವೆಂಕಟೇಶ ಮೀರಜಕರ, ಪಿಂಟು ಬಾಸುತಕರ, ಶ್ರೀಕಾಂತ ವಡೆ, ಶ್ಯಾಮ ಮಂಚಲಕರ, ಬಸು ದಾಡಮೋಡೆ ಉಪಸ್ಥಿತರಿದ್ದರು. ರಮೇಶ ಸಿಂದಗಿ ನಿರೂಪಿಸಿದರು.