ಕಾರ್ಮಿಕರಿಗೆ ಕಿಟ್​ ವಿತರಣೆ

4
Published on

ಖಾನಾಪುರ: ಪಟ್ಟಣದಲ್ಲಿ ಕಾರ್ಮಿಕ ಇಲಾಖೆಯಿಂದ ನೀಡಲಾಗುವ ಕಿಟ್​ಗಳನ್ನು ಶಾಸಕ ವಿಠ್ಠಲ ಹಲಗೇಕರ 434 ಕಾರ್ಮಿಕರಿಗೆ ಈಚೆಗೆ ವಿತರಿಸಿದರು. ಬಳಿಕ ಮಾತನಾಡಿದ ಅವರು, ಕ್ಷೇತ್ರದಲ್ಲಿ ಅಂದಾಜು 30,000ಕ್ಕೂ ಅಧಿಕ ಕಟ್ಟಡ ಹಾಗೂ ವಿವಿಧ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಅವರ ಕೆಲಸಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಿಟ್​ ವಿತರಿಸಲಾಗಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ತಾಪಂ ಇಒ ವಿಲಾಸ ರಾಜ್​, ಕಾರ್ಮಿಕ ಇಲಾಖೆ ನಿರೀಕಿ ದೀಪಾ ಬಂಡಿ, ಡಿಒ ಮಂಜುನಾಥ ವಾಲ್ಮೀಕಿ, ಪ್ರ ಭಾಕರ ಪಾಟೀಲ, ಕೃಷಿ ಪತ್ತಿನ ಸಂದ ನಿರ್ದೇಶಕ ಶಂಕರ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net