

ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ 2021ನೇ ಸಾಲಿನಲ್ಲಿ ಆಯ್ಕೆಯಾದ ನೇರ ಪಾವತಿ, ನೇರ ನೇಮಕಾತಿ ಪೌರ ಕಾರ್ಮಿಕರಿಗೆ ಆದೇಶ ನೀಡಲು ಆಗ್ರಹಿಸಿ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಶರಣು ಅತನೂರ, ಅನೀಲ ಚಕ್ರ, ಪ್ರಮೋದ ದೇವಳಗುಡ್ಡ, ಬಂದೇನವಾಜ, ಅವಿನಾಶ ಕಪನೂರ, ಆನಂದ ಸೂರ್ಯವಂಶಿ, ಲೋಕೇಶ ದೊಡ್ಡಮನಿ, ವೆಂಕಟರಡ್ಡಿ, ಸದಾನಂದ ಮೇತ್ರೆ, ಮಶಾಕ್ ಅಲಿ, ಶರಣಗೌಡ ಪಾಟೀಲ್, ಅರುಣ ಕೋಟೆ ಇತರರಿದ್ದರು.