ಕಾರ್ಮಿಕರಿಗಾಗಿ ಜೊಲ್ಲೆ ದಂಪತಿ ಶ್ರಮ

7NPN2
ನಿಪ್ಪಾಣಿಯ ಬಿಜೆಪಿ ಮಹಿಳಾ ಮೋರ್ಚಾದಿಂದ ಕೈಮಗ್ಗ ಕಾರ್ಮಿಕರನ್ನು ಸತ್ಕರಿಸಲಾಯಿತು. ಸೋನಾಲಿ ಉಪಾಧ್ಯೆ, ನೀತಾ ಬಾಗಡೆ, ವಿಭಾವರಿ ಖಾಂಡಕೆ, ಉಪಾಸನಾ ಗಾರವೆ ಮತ್ತಿತರರು ಇದ್ದಾರೆ.
Published on

ನಿಪ್ಪಾಣಿ: ನಗರದಲ್ಲಿ ಭಾನುವಾರ ಬಿಜೆಪಿ ಮಹಿಳಾ ಮೋರ್ಚಾದಿಂದ ಭಾನುವಾರ ರಾಷ್ಟ್ರೀಯ ಕೈಮಗ್ಗ ದಿನ ಆಚರಿಸಲಾಯಿತು. ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಪದಾಧಿಕಾರಿಗಳು ಹಾಗೂ ಸದಸ್ಯೆಯರು ಸ್ಥಳೀಯ ಹಾಗೂ ತಾಲೂಕಿನ ಶ್ರೀಪೇವಾಡಿ ಗ್ರಾಮದ ಕೈಮಗ್ಗ ಉದ್ಯೋಗದ ಕಾರ್ಮಿಕರನ್ನು ಸತ್ಕರಿಸಿದರು. ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ವಿಭಾವರಿ ಖಾಂಡಕೆ ಮಾತನಾಡಿ, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಮಾರ್ಗದರ್ಶನದಲ್ಲಿ ನಗರದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಆಚರಿಸಲಾಗುತ್ತಿದೆ. ಜೊಲ್ಲೆ ದಂಪತಿ ತಾಲೂಕಿನ ಎಲ್ಲ ವರ್ಗದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಕೈಮಗ್ಗ ಕಾರ್ಮಿಕರಿಗಾಗಿಯೂ ವಿಶೇಷವಾಗಿ ಶ್ರಮಿಸುತ್ತಿದ್ದಾರೆ ಎಂದರು.

ನಗರಸಭೆ ಉಪಾಧ್ಯಕ್ಷೆ ನೀತಾ ಬಾಗಡೆ, ಸದಸ್ಯೆ ಉಪಾಸನಾ ಗಾರವೆ, ಸೋನಾಲಿ ಉಪಾಧ್ಯೆ, ಶೋಭಾ ಸುರೇಬಾನ, ಜೀಜಾಬಾಯಿ ರಾವುತ, ಮಹಾದೇವಿ ನೇರ್ಲಿ, ಸವಿತಾ ಪಾಟೀಲ, ಗೀತಾ ಬೆಳವಿ, ಅರ್ಚನಾ ಪಡದಾಳೆ, ವೈಶಾಲಿ ಕದಂ, ವರ್ಷಾ ಭೋಪಳೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net