

ಚಿತ್ರದುರ್ಗ: ಕಾರ್ಮಿಕರ ಶ್ರಮವಿಲ್ಲದೆ ದೇಶ ಅಭಿವೃದ್ಧಿ ಅಸಾಧ್ಯವೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಹೇಳಿದರು. ಜಿಲ್ಲಾ ಕಾಂ ಗ್ರೆ ಸ್ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಮಹಾತ್ಮಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ದಿನಕ್ಕೆ 8 ಗಂಟೆ ಅವಧಿ ದುಡಿಮೆ ನಿಗದಿ ಬೇಡಿಕೆ ಮುಂದಿಟ್ಟುಕೊಂಡು ಅಮೇರಿಕದ ಚಿಕಾಗೋದಲ್ಲಿ ಚಳವಳಿ ಆರಂಭಿಸಿದ ಕಾರ್ಮಿ ಕರು ಇವತ್ತಿಗೂ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಸಂವಿಧಾನ ಜಾರಿ ಬಳಿಕ ಕಾರ್ಮಿಕರಿಗೆ ಸರ್ಕಾರಿಂದ ಸೌಲಭ್ಯಗಳು ಸಿ ಗುತ್ತಿವೆ. ರಾಜ್ಯಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿಗಳು ಕಾರ್ಮಿಕರ ಕುಟುಂಬಗಳಿಗೂ ತಲುಪಿವೆ. ಮಾಲೀಕರು ಕಾರ್ಮಿಕರನ್ನು ಗೌರವ ದಿಂದ ನಡೆಸಿಕೊಳ್ಳಬೇಕೆಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಸೈಯದ್‌ಮೊಹಿದ್ದೀನ್ ಚೋಟು ಮಾತನಾಡಿ,ರೈತರಂತೆ ಕಾರ್ಮಿಕರು ಕೂಡ ದೇಶದ ಬೆನ್ನೆಲುಬಾಗಿ ದುಡಿಯುತ್ತಿದ್ದಾರೆ. ದೇಶ ಕಟ್ಟುವಲ್ಲಿ ಕಾರ್ಮಿಕರ ಶ್ರಮವಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ‌್ಯದರ್ಶಿ ಡಿ.ಎನ್. ಮೈಲಾರಪ್ಪ ಮಾತನಾಡಿ,ರಾಜ್ಯಸರ್ಕಾರ ಕಾರ್ಮಿಕ ಕಲ್ಯಾಣ ಮಂಡಳಿ ಮೂಲಕ ಸೌಲಭ್ಯಗಳನ್ನು ಕಾರ್ಮಿಕರಿಗೆ ಒದಗಿಸುತ್ತಿದೆ ಎಂದರು.
ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಸೈಯದ್‌ಅಫಾಖ್‌ಅಹಮದ್ ಮಾತನಾಡಿ,ಇವತ್ತಿಗೂ ಕಾರ್ಮಿಕರ ನ್ಯಾಯಯುತ ಬೇಡಿಕೆಗಳು ಈಡೇರಿಲ್ಲವೆಂದರು. ಕೆ.ಪಿ.ಸಂಪತ್‌ಕುಮಾರ್,ಅಬ್ದುಲ್ಲಾ,ಪ್ರಕಾಶ್‌ರಾಮನಾಯ್ಕ,ಫರಾನ್,ಅಬ್ದುಲ್‌ರೆಹಮಾನ್,ಚಾಂದ್‌ಪೀರ್,ಎಸ್. ಎನ್.ರವಿಕುಮಾರ್,ಎನ್.ಡಿ.ಕುಮಾರ್,ಡಿ.ಕುಮಾರ್ ಮತ್ತಿತರರು ಇದ್ದರು.