ಕಾರ್ಮಿಕರನ್ನು ಗುಲಾಮರನ್ನಾಗಿಸಲು ಯತ್ನ

9-SanduruP3
Published on

ಸಂಡೂರು: ಕೇಂದ್ರ ಸರ್ಕಾರ ದುಡಿಯುವ ಜನರ ಜೀವನೋಪಾಯದ ಮೇಲೆ ನಿರಂತರ ದಾಳಿ ಗಳನ್ನು ಎಸಗುತ್ತಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ.ಚನ್ನಬಸಯ್ಯ ಆರೋಪಿಸಿದರು.

ಪಟ್ಟಣದ ತಾಪಂ ಕಚೇರಿ ಮುಂದೆ ಸಿಐಟಿಯು, ಕೆಪಿಆರ್‌ಎಸ್, ಗ್ರಾಪಂ ನೌಕರರ ಸಂಘ ಹಾಗೂ ಇತರ ವಿವಿಧ ಸಂಘಟನೆಗಳಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಬುಧವಾರ ಮಾತನಾಡಿದರು. ದುಡಿಯುವ ಜನರ ಮೇಲೆ ಗುಲಾಮಗಿರಿ ಹೇರುವುದಕ್ಕಾಗಿ 29 ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿ ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ ಎಂದು ದೂರಿದರು.

ಗುತ್ತಿಗೆ, ಹೊರಗುತ್ತಿಗೆ, ನಿಗದಿತ ಅವಧಿಯ ಉದ್ಯೋಗ ಮುಂತಾದ ಹೆಸರಿನಲ್ಲಿ ಕಾರ್ಮಿಕರ ನೇಮಕ ನಿಲ್ಲಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು. ಅಸಂಘಟಿತ ಕಾರ್ಮಿಕರು ಮತ್ತು ಕೃಷಿ-ತೋಟಗಾರಿಕೆ ಕಾರ್ಮಿಕರಿಗೆ ಮಾಸಿಕ ಒಂಬತ್ತು ಸಾವಿರ ರೂ. ಪಿಂಚಣಿ ಹಾಗೂ ಸಾಮಾಜಿಕ ಭದ್ರತೆ ಖಾತ್ರಿ ಪಡಿಸಬೇಕು ಎಂದು ಒತ್ತಾಯಿಸಿದರು.

ಕಂದಾಯ ನಿರೀಕ್ಷಕ ಬಸವರಾಜ್, ತಾಪಂ ಎಡಿ ರೇಣುಕಾಚಾರ್ಯಸ್ವಾಮಿ ಮನವಿ ಸ್ವೀಕರಿಸಿದರು. ತಾಲೂಕ ಸಂಚಾಲಕ ಎಚ್.ಎಂ.ಮಲ್ಲಿಕಾರ್ಜುನ ಸ್ವಾಮಿ, ವಿ.ದೇವಣ್ಣ, ಟಿ.ಎಸ್.ಖಾಜಬನ್ನಿ, ರೇಖಾ, ದ್ರಾಕ್ಷಾಯಿಣಿ, ಎಸ್.ಕಾಲುಬಾ, ಎನ್.ಸಂಕಣ್ಣ, ಎ.ಸ್ವಾಮಿ, ಎಚ್.ದುರ್ಗಮ್ಮ, ಖಲಂದರ್ ಬಾಷಾ, ಪಂಪನಗೌಡ, ಮಲ್ಲಿಕಾರ್ಜುನ ಮೇಟಿ, ಪರಮೇಶ್ವರ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net