ಕಾರ್ಮಿಕರ ಮಕ್ಕಳಿಗೆ ಸಿಗಲಿ ಉಚಿತ ಶಿಕ್ಷಣ

CTD 28 MHAILA SAMANAD -KARIMIKA--00009
Published on

ಚಿತ್ರದುರ್ಗ: ಕೇಂದ್ರ ಮತ್ತು ರಾಜ್ಯಸರ್ಕಾರಗಳು ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡ ಬೇಕೆಂದು ವಕೀಲ ಬಿ.ಕೆ.ರಹಮತ್‌ವುಲ್ಲಾ ಹೇಳಿದರು. ಕರ್ನಾ ಟಕ ಸ್ಟೇಟ್ ಕನ್ಸ್‌ಟ್ರಕ್ಷನ್ ವರ್ಕರ್ಸ್‌ ಸೆಂಟ್ರಲ್ ಯೂನಿಯನ್,ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿ ಹಾಗೂ ರಾಜ್ಯಅಸಂಘಟಿತ ಕಾರ್ಮಿಕರ ಸಂಘಟನೆ ಸಂಯುಕ್ತಾಶ್ರಯದಲ್ಲಿ ನಗರದ ಮಹಿಳಾ ಸೇವಾ ಸಮಾಜದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಮಿ ಕರ ದಿನಾಚರಣೆ ಹಾಗೂ ನೋಟ್‌ಬುಕ್ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕೊಳಗೇರಿ ನಿವಾಸಿಗಳ ಮಕ್ಕಳ ಬಡತನದ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗಬಾರದು. ಅವರಿಗೆ ಉಚಿತ ಶಿಕ್ಷಣ ಕೊಡಲು ರಾಜ್ಯ ಮತ್ತು ಕೇಂ ದ್ರ ಸರ್ಕಾರಗಳು ಸೂಕ್ತ ಕ್ರಮ ವಹಿಸಬೇಕು. ಬಾಲ್ಯವಿವಾಹ,ಕಠಿಣ ಶಿಕ್ಷೆಗೆ ದಾರಿಯಾಗುತ್ತದೆ ಎಂದು ಪಾಲಕರಲ್ಲಿ ಜಾಗೃತಿ ಮೂಡಿಸ ಬೇಕು. ಶಿಕ್ಷ ಣದಿಂದ ಉತ್ತಮ ಜೀವನ ಸಾಧ್ಯವೆಂದರು. ಉದ್ಯಮಿ ಸುರೇಶ್‌ಬಾಬು ಅವರು ಮಾತನಾಡಿ,ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋ ಟ್‌ಬುಕ್ ವಿತರಿಸುವ ಕೆಕೆಎನ್‌ಎಸ್‌ಎಸ್ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ಅವರ ಕಾರ‌್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನರ್‌ವೀಲ್ಹ್ ಕ್ಲಬ್ ಅಧ್ಯಕ್ಷೆ ಮೋಕ್ಷಾರುದ್ರಸ್ವಾಮಿ ಮಾತನಾಡಿ,ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವಂತೆ ಪಾಲಕರಿಗೆ ಸಲಹೆ ನೀಡಿದರು. ಮಹಿಳಾ ಸೇವಾ ಸಮಾಜದ ಮಾಜಿ ಉಪಾಧ್ಯಕ್ಷೆ ಸುಮನಾ ಅಂಗಡಿ ಮಾತನಾಡಿ,ಕಾರ್ಮಿಕರಿಗೆ ಅವರು ಕೆಲಸ ಮಾಡುವ ಸ್ಥಳದಲ್ಲಿ ಮೂಲ ಸೌಲಭ್ಯಗಳಿರಬೇಕೆಂದರು. ಉಚಿತ ಆರೋಗ್ಯ ತಪಾಸಣೆ,ವರ್ಷಕ್ಕೊಮ್ಮೆ ಬೋನಸ್,ವಿಮಾ ಸೌಲಭ್ಯ ಒದಗಿಸಬೇಕೆಂದರು. ರಾಜ್ಯಜಾನಪದ ಜಾ ಗೃತಿ ಪರಿಷತ್ ಅಧ್ಯಕ್ಷ ಎಚ್.ಪ್ಯಾರೇಜಾನ್,ಜಿಲ್ಲಾಧ್ಯಕ್ಷ ಬಿ.ಕೃಷ್ಣಪ್ಪ, ಕೆಕೆಎನ್‌ಎಸ್‌ಎಸ್ ಉಪಾಧ್ಯಕ್ಷ ಎನ್.ರಂಗಸ್ವಾಮಿ,ವಕೀಲೆ ಲತಾಉಮೇಶ್, ಭಾಗ್ಯಕುಮಾರ್ ಇದ್ದರು. ಗಣೇಶ್ ಅಧ್ಯಕ್ಷತೆ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net