ಕಾರ್ಮಿಕರ ಬಾಕಿ ವೇತನ ಪಾವತಿಸಿ

29-08-Shiva-2
ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಸಂಘದ ಅಧ್ಯಕ್ಷ ಮಹೇಶ ಚೀಕಲಪರ್ವಿ, ಪದಾಕಾರಿಗಳಾದ ಅಣ್ಣಪ್ಪ ಶಿರಶ್ಯಾಡ್, ಸುಲೋಚನಾ, ಅಂಬಿಕಾ, ಗಾಯತ್ರಿ, ಮಹೇಶ್ವರಿ, ಹುಚ್ಚಣ್ಣ, ಅಮರೇಶ, ಆಶ್ವತ್ಥಾಮ, ಹುಲಿಗೆಪ್ಪ, ಹನುಮರೆಡ್ಡಿ ಇದ್ದರು.
Published on

ರಾಯಚೂರು: ವಿವಿಧ ಇಲಾಖೆಗಳ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಬಾಕಿ ವೇತನ ಪಾವತಿಸಬೇಕು ಮತ್ತು ಶಾಸನಬದ್ಧ ಸೌಲಭ್ಯ ಖಾತ್ರಿಪಡಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಬಾಕಿ ವೇತನ ಪಾವತಿ ಮತ್ತು ಇನ್ನಿತರ ಬೇಡಿಕೆ ಈಡೇರಿಸುವಂತೆ ಹಲವಾರು ಬಾರಿ ಅಕಾರಿಗಳಿಗೆ ಮನವಿ ಮಾಡಲಾಗಿದ್ದರೂ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದರು.
ವಸತಿನಿಲಯಗಳಲಿ ಹಲವು ವರ್ಷಗಳಿಂದ ಹೊರಗುತ್ತಿಗೆ ಅಡಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ನಾಲ್ಕರಿಂದ ಆರು ತಿಂಗಳ ವೇತನ ಬಾಕಿಯಿದೆ. ಇದರಿಂದ ಕಾರ್ಮಿಕರು ಉಪಜೀವನ ಸಾಗಿಸಲು ಪರದಾಡುವಂತಾಗಿದೆ. ಬೆಲೆ ಏರಿಕೆ ಮತ್ತು ಮಕ್ಕಳ ಶಿಕ್ಷಣ, ಮನೆ ಬಾಡಿಗೆ ಮುಂತಾದವುಗಳನ್ನು ನಿಭಾಯಿಸಲು ಸಾಧ್ಯವಾಗದಂತಾಗಿದೆ.
ಪ್ರತಿ ತಿಂಗಳು 7ರೊಳಗೆ ವೇತನ ಪಾವತಿಗೆ ಕ್ರಮಕೈಗೊಳ್ಳಬೇಕು. ಕಳೆದ ಡಿಸೆಂಬರ್‌ನಲ್ಲಿ ಆಗಿರುವ ವೇತನ ಪರಿಷ್ಕರಣೆಯನ್ನು ಜಾರಿಗೊಳಿಸಬೇಕು. ಹೆಚ್ಚುವರಿ ವೇತನವನ್ನು ಅರಿಯರ್ಸ್ ರೂಪದಲ್ಲಿ ಕಾರ್ಮಿಕರಿಗೆ ನೀಡಬೇಕು. ಏಪ್ರಿಲ್‌ನಿಂದ ಜಾರಿಯಾಗಬೇಕಾದ ತುಟ್ಟಿಭತ್ಯೆಯನ್ನು ಕಾರ್ಮಿಕರಿಗೆ ಸಂದಾಯ ಮಾಡಬೇಕು.
ಕಾರ್ಮಿಕರಿಗೆ ವೇತನ ಚೀಟಿ, ರಜೆ ಸೌಲಭ್ಯ ನೀಡಬೇಕು. ಪಿಎ್, ಇಎಸ್‌ಐ ಬಗ್ಗೆ ಮಾಹಿತಿ ನೀಡಬೇಕು. ವಾರದಲ್ಲಿ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿದದಿದ್ದಲ್ಲಿ ಕೆಲಸ ಸ್ಥಗಿತಗೊಳಿಸಿ ಹೋರಾಟ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಮಹೇಶ ಚೀಕಲಪರ್ವಿ, ಪದಾಕಾರಿಗಳಾದ ಅಣ್ಣಪ್ಪ ಶಿರಶ್ಯಾಡ್, ಸುಲೋಚನಾ, ಅಂಬಿಕಾ, ಗಾಯತ್ರಿ, ಮಹೇಶ್ವರಿ, ಹುಚ್ಚಣ್ಣ, ಅಮರೇಶ, ಆಶ್ವತ್ಥಾಮ, ಹುಲಿಗೆಪ್ಪ, ಹನುಮರೆಡ್ಡಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net