ಕಾರ್ಮಿಕರ ಪಾತ್ರ ಅನನ್ಯ

Mahantesh Kujalagi
Published on

ಬೈಲಹೊಂಗಲ: ಪುರಸಭೆಯೊಂದಿಗೆ ಜನತೆ ಕೈಜೋಡಿಸಿದಾಗ ಮಾತ್ರ ಮಾದರಿ ಪಟ್ಟಣ ನಿರ್ಮಾಣ ಸಾಧ್ಯ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಪಟ್ಟಣದ ಕಿತ್ತೂರು ಚೆನ್ನಮ್ಮ ಸಮಾಧಿ ಐಕ್ಯ ಸ್ಥಳದಲ್ಲಿ ಚನ್ನಮ್ಮ ಮೂರ್ತಿಗೆ ಗೌರವ ಸಮರ್ಪಿಸಿ ಬಳಿಕ ಸ್ವಚ್ಛ ಭಾರತ ಮಿಷನ್ ನಗರ-2.0 ಯೋಜನೆಯ ಇಂಡಿಯನ್ ಸ್ವಚ್ಛತಾ ಲೀಗ್-20 ಕಾರ್ಯಕ್ರಮದಡಿ ಬೈಲಹೊಂಗಲ ಚಾಂಪಿಯನ್ಸ್ ತಂಡದಿಂದ ಈಚೆಗೆ ಹಮ್ಮಿಕೊಂಡಿದ್ದ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಬೈಲಹೊಂಗಲ ಪುರಸಭೆ ಸ್ವಚ್ಚ ಸರ್ವೇಕ್ಷಣ 2022 ರಲ್ಲಿ ರಾಜ್ಯಕ್ಕೆ 2ನೇ ಸ್ಥಾನ, ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದು, ಕಾರ್ಮಿಕರ ಪಾತ್ರ ಅನನ್ಯವಾಗಿದೆ ಎಂದರು.

ಶಾಖಾ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ ಬೈಲಹೊಂಗಲ ಚಾಂಪಿಯನ್ಸ್ ಎಂಬ ಲೋಗೋ ಹೊಂದಿರುವ ಟೀ ಶರ್ಟ್ ಬಿಡುಗಡೆ ಮಾಡಿದರು. ರಾಯಣ್ಣ ಮೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸ್ವಚ್ಛತೆ ಕುರಿತು ಅರಿವು ಮೂಡಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ, ಪುರಸಭೆ ಸದಸ್ಯರಾದ ಬಸವರಾಜ ಜನ್ಮಟ್ಟಿ, ಜಗದೀಶ ಜಂಬಗಿ, ಬುಡ್ಡೆಸಾಬ್ ಶಿರಸಂಗಿ, ಅಮಿರಬಿ ಭಾಗವಾನ್, ಹೇಮಲತಾ ಹಿರೇಮಠ, ಲಕ್ಷ್ಮೀ ಬಡ್ಡಿ, ದಿಲ್ಶಾದ್ ನದಾಫ್, ಶಶಿಕಲಾ ಕಲ್ಲೊಳ್ಳಿ, ವಾಣಿಶ್ರೀ ಪತ್ತಾರ, ಕಚೇರಿ ವ್ಯವಸ್ಥಾಪಕ ಎಂ.ಐ.ಕುಟ್ರಿ, ಬಿ.ಆರ್.ಗುಡಿಮನಿ, ಎಸ್.ಎನ್.ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net