

ಚಿತ್ರದುರ್ಗ: ಕಾರ್ಮಿಕರಿಗೆ ಸಿಗಬೇಕಾದ ನ್ಯಾಯಯುತ ಸವಲತ್ತುಗಳನ್ನು ಒದಗಿಸುವಂತೆ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾ ಮಿ ರಾಜ್ಯಸರ್ಕಾರವನ್ನು ಒತ್ತಾಯಿಸಿದರು. ಸಂಘದ ಕಚೇರಿಯಲ್ಲಿ ಬುಧವಾರ ಕಾರ್ಮಿಕರ ದಿನ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಣೆಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ನೋಂದಣಿ ಕಾರ್ಡ್ ವಿತರಣೆ ವಿಳಂಬದಿಂದಾಗಿ ಸರ್ಕಾರಿ ಸೌಲತ್ತುಗಳಿಂದ ಕಾರ್ಮಿಕರು ವಂಚಿತರಾಗುತ್ತಿದ್ದಾರೆಂದು ರಾಜ್ಯಸರ್ಕಾರ ವಿರುದ್ಧ ತಿಪ್ಪೇಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ತಾಲೂಕು ಅಧ್ಯಕ್ಷ ಜಾವಿದ್‌ಭಾಷ,ಪಿ.ಲಕ್ಷ್ಮೀದೇವಿ,ಎ.ನಾಗರಾಜು, ಎಂ.ಮಲ್ಲಿಕಾರ್ಜುನ್,ಮನ್ಸೂರ್‌ಭಾಷ,ಆರ್.ರಮೇ ಶ್,ಎಂ.ಸುರೇಶ್,ಟಿ.ಅಶೋಕ್,ವಿ.ಬಸವರಾಜ್,ಓಂಕಾರಪ್ಪ,ಹನುಮಂತಪ್ಪ,ಚಳ್ಳಕೆರಪ್ಪ, ಪಿ.ರಾಜು,ಸಿ.ಎಚ್.ನಾಗಭೂಷಣ್,ಎಂ.ರಾ ಜು, ತಿಪ್ಪೇಸ್ವಾಮಿ,ವೀರೇಶಿ ಮತ್ತಿತರರು ಇದ್ದರು.