ಕಾರ್ಮಿಕ ಶಕ್ತಿ ದೇಶದ ಅತಿ ದೊಡ್ಡ ಶಕ್ತಿ: ಬಿ.ಎಸ್.ಯಡಿಯೂರಪ್ಪ

SKP WEBBBBB
Published on

ಶಿಕಾರಿಪುರ: ರಾಷ್ಟ್ರ ಕಟ್ಟಿದವರು ಕಾರ್ಮಿಕರು, ರಾಷ್ಟ್ರ ಕಟ್ಟುವವರೂ ಕಾರ್ಮಿಕರು. ಕಾರ್ಮಿಕ ಶಕ್ತಿ ದೇಶದ ಅತಿ ದೊಡ್ಡ ಶಕ್ತಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಸಾಂಸ್ಕೃತಿಕ ಭವನದಲ್ಲಿ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕರ್ನಾಟಕ ಕನ್‌ಸ್ಟ್ರಕ್ಷನ್ ವರ್ಕರ್ಸ್ ಯೂನಿಯನ್, ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಟೂಲ್ ಕಿಟ್ ಹಾಗೂ ಇ-ಶ್ರಮ ಕಾರ್ಡ್ ವಿತರಿಸಿ ಮಾತನಾಡಿ, ಕಾರ್ಮಿಕರ ಸುರಕ್ಷೆಗಾಗಿ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ. ಕಾರ್ಮಿಕರು ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಕಾರ್ಮಿಕರು ತಮ್ಮ ಸುರಕ್ಷೆ ಮತ್ತು ಕುಟುಂಬದ ಸುರಕ್ಷೆಯ ಬಗ್ಗೆ ಗಮನಕೊಡಬೇಕು. ಪ್ರತಿ ಕಾರ್ಮಿಕ ಈ ದೇಶದ ಆಸ್ತಿ. ಕಾರ್ಮಿಕ ಸಂಘಟನೆಗಳು ಹಿತಕಾಯುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net