

ಕಲಬುರಗಿ: ಕೇಂದ್ರ ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್‌ನಿಂದ ದೇಶಾದ್ಯಂತ ಜು.೧೦ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿ¯್ಲÁ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಬಿ.ಸಜ್ಜನ ತಿಳಿಸಿದರು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲï ವೃತ್ತದಿಂದ ಜಿ¯್ಲÁಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ ಜಿ¯್ಲÁಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ವಿರೋಧಿ ಕಾನೂನು ಜಾರಿಗೆ ತರಲು ಮುಂದಾಗಿದ್ದು, ಪ್ರಕ್ರಿಯೆಗಳನ್ನು ಮುಂದುವರಿಸಿದೆ. ತಡೆಯಲು ಹಿಂದೆಯೂ ಪ್ರತಿಭಟನೆ ನಡೆಸಿದ್ದರೂ ಸಹ ಮುಂದುವರಿದಿದೆ. ಅದನ್ನು ಖಂಡಿಸಿ, ಪ್ರಸ್ತುತ ರಾಷ್ಟಾçದ್ಯಂತ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಹಿAದೆ ಕಾರ್ಮಿಕರು ಪ್ರತಿಭಟನೆಗೆ ೧೫ದಿನ ಮೊದಲೇ ನೋಟಿಸ್ ನೀಡಬೇಕಿತ್ತು. ಪ್ರಸ್ತುತ ೬೦ ದಿನ ಕೇಳಿ, ಅನ್ಯಾಯ ಮಾಡಲಾಗಿದೆ. ೧೦೦ ಕೆಲಸಗಾರರು ಉದ್ಯಮ ಮುಚ್ಚಲು ಹಿಂದೆ ಸರ್ಕಾರದ ಅನುಮತಿ ಬೇಕಿತ್ತು. ಪ್ರಸ್ತುತ ಅದನ್ನು ತೆಗೆದು ಹಾಕಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ ಎಂದು ಆರೋಪಿಸಿದರು.
ಖಾಸಗೀಕರಣ ನಿಲ್ಲಿಸಬೇಕು, ಎಸ್‌ಎಂಪಿ ರದ್ದು ಮಾಡಬೇಕು, ಎಲ್ಲ ಕಾರ್ಮಿಕರಿಗೆ ಮಾಸಿಕ ೨೬೦೦೦ ರೂ. ಕನಿಷ್ಠ ವೇತನ ನಿಗದಿ ಮಾಡಬೇಕು, ಉದ್ಯೋಗ ಭದ್ರತೆ ನೀಡಬೇಕು, ಸಮಾನ ವೇತನ ಮತ್ತು ಸೌಲಭ್ಯ ನೀಡಬೇಕು. ಪಿಂಚಣಿದಾರರಿಗೆ ಕನಿಷ್ಠ ೯೦೦೦ ರೂ. ಪಿಂಚಣೆ ಖಚಿತಪಡಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಕುರಿತು ಮನವಿ ಸಲ್ಲಿಸಲಾಗುವುದು ಎಂದರು.
ಸಮಿತಿ ಜಿ¯್ಲÁಧ್ಯಕ್ಷೆ ಶಾಂತಾ ಘಂಟಿ ಮಾತನಾಡಿ, ಅಂಗನವಾಡಿ ನೌಕರರಿಗೆ ಕೇಂದ್ರ ಸರ್ಕಾರ ಕಳೆದ ಹಲವು ವರ್ಷದಿಂದ ಒಂದೇ ಗೌರವ ಧನ ನೀಡುತ್ತಿದ್ದು, ಅದನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.