ಕಾರ್ಮಿಕ ವಿರೋಧಿ ನೀತಿಗಳನ್ನು ರದ್ದುಪಡಿಸುವಂತೆ ಎಸ್ಕೆಎಂ, ಜೆಸಿಟಿಯು ಪ್ರತಿಭಟನೆ

skm, jctu raichur protest
Published on

ರಾಯಚೂರು: ಕಾರ್ಮಿಕರು ಹಾಗೂ ರೈತರಿಗೆ ಮಾರಕವಾಗಿರುವ ನಾಲ್ಕು ಕಾರ್ಮಿಕರ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ನಗರದ ಮಹತ್ಮಾಗಾಂಧೀ ಜಿಲ್ಲಾ ಕ್ರೀಡಾಂಗಣದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಮಂಗಳವಾರ ಹಮ್ಮಿಕೊಳ್ಳಲಾಯಿತು.

ಎಲ್ಲಾ ಬೆಳೆಗಳಿಗೆ ಉತ್ಪಾದನೆಯ ಸಮಗ್ರ ವೆಚ್ಚ(ಸಿ2)+ಶೇ.50ರ ಜತಗೆ ಬೆಂಬಲ ಬೆಲೆಯನ್ನೂ ಕಾನೂನುಬದ್ಧವಾಗಿ ಖಾತರಿಪಡಿಸಿ, 4 ಕಾರ್ಮಿಕ ವಿರೋಧಿ ನೀತಿಗಳನ್ನು ರದ್ದುಗೊಳಿಸಬೇಕು. ಕಾರ್ಮಿಕರ ಹೊರಗುತ್ತಿಗೆ ಪದ್ಧತಿ ರದ್ದುಪಡಿಸಬೇಕು, ರಾಷ್ಟ್ರೀಯ ಕನಿಷ್ಠ ವೇತನವನ್ನು ತಿಂಗಳಿಗೆ 26,000 ರೂ.ಯಂತೆ ಜಾರಿಗೊಳಿಸಬೇಕು ಮತ್ತು ಪಿಂಚಣಿ ತಿಂಗಳಿಗೆ 10,000 ರೂ. ಮತ್ತು ಸಂಘಟಿತ, ಅಸಂಘಟಿತ, ಯೋಜನೆ ಕಾರ್ಯಕರ್ತರು ಮತ್ತು ಗುತ್ತಿಗೆ ಕಾರ್ಮಿಕರು ಮತ್ತು ಕೃಷಿ ವಲಯ ಸೇರಿದಂತೆ ಎಲ್ಲ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಲಾಯಿತು.

ಬೆಳೆಗಳು ಮತ್ತು ಜಾನುವಾರುಗಳಿಗೆ ಸಮಗ್ರ ಸಾರ್ವಜನಿಕ ವಲಯದ ವಿಮಾ ಯೋಜನೆ ಮತ್ತು ಗೇಣಿದಾರ ರೈತರಿಗೆ ಎಲ್ಲ ಯೋಜನೆಗಳ ಪ್ರಯೋಜನಗಳನ್ನು ಖಚಿತಪಡಿಸಬೇಕು. ಜಿಲ್ಲೆಯಲ್ಲಿ ಭತ್ತ, ತೊಗರಿ, ಜೋಳ, ಖರೀದಿ ಕೇಂದ್ರಗಳನ್ನು ತೆರೆಯಬೇಕು, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕು, ವಿಮಾನ ನಿಲ್ದಾಣದ ಕಾಮಗಾರಿ ಪ್ರಾರಂಭಿಸಬೇಕು, ಮೆಣಸಿನಕಾಯಿ ಮಾರುಕಟ್ಟೆಯನ್ನು ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ಜಿ.ವೀರೇಶ, ಪ್ರಭಾಕರ ಪಾಟೀಲ್, ಅಮಿನ್ ಪಾಷಾ ದಿದ್ದಗಿ, ಎನ್.ಎಸ್.ವೀರೇಶ, ಮಲ್ಲನಗೌಡ, ಕರಿಯಪ್ಪ ಅಚ್ಚೊಳಿ, ಎಸ್.ಮಾರೆಪ್ಪ, ಗೋಪಾಲ ರಾಂಪೂರ, ಡಿ.ಎಸ್.ಶರಣಬಸವ, ಆಂಜನೇಯ ಕುರುಬದೊಡ್ಡಿ, ರಂಗನಾಥ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net