ಕಾರ್ಮಿಕ ಭವನ ನಿರ್ಮಾಣಕ್ಕೆ ಶ್ರಮಿಸುವೆ

PH 09
Published on

ಆಳಂದ: ದುಡಿಯುವ ಕಾರ್ಮಿಕ ವರ್ಗಕ್ಕೆ ಯಾವುದೇ ಜಾತಿ, ಧರ್ಮವಿಲ್ಲ. ಜಿಲ್ಲೆಯಲ್ಲಿಯೇ ಹೆಚ್ಚು ಕಾರ್ಮಿಕರು ತಾಲೂಕಿನಲ್ಲಿದ್ದಾರೆ. ಹೀಗಾಗಿ ಕಾರ್ಮಿಕ ಭವನ ನಿರ್ಮಾಣಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಶಾಸಕ ಬಿ.ಆರ್.ಪಾಟೀಲ್ ಭರವಸೆ ನೀಡಿದರು.

ಗುರುಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಗಡಿನಾಡು ಕಾರ್ಮಿಕರ ಸೇವಾ ಸಂಘ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಟ್ಟಡ ಕಾರ್ಮಿಕರು ಯಾವುದೇ ಆಸೆ-ಆಮಿಷಗಳಿಗೆ ಮೋಸ ಹೋಗಬಾರದು. ಯಂತ್ರಗಳ ಬಳಕೆಯಿಂದ ದುಡಿವ ಕೈಗಳಿಗೆ ಕೆಲಸ ಇಲ್ಲದಂತಾಗಿದೆ. ತಾಲೂಕಿನ ಸುಮಾರು 68 ಸಾವಿರಕ್ಕೂ ಅಧಿಕ ಕಾರ್ಮಿಕರಿದ್ದು, ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನವಿದ್ದರೆ ಗುರುತಿಸಿ ಭವನ ನಿರ್ಮಾಣ ಮಾಡಲಾಗುವುದು. ಅಲ್ಲದೆ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವೆ ಎಂದರು.
ಹಿರಿಯ ಕಾರ್ಮಿಕ ನಿರೀಕ್ಷಕ ರವೀಂದ್ರಕುಮಾರ ಬಲ್ಲೂರ, ಪ್ರಭುದೇವ ಯಳಸಂಗಿ ಮಾತನಾಡಿದರು.

ಕಾರ್ಮಿಕ ಇಲಾಖೆಯ ಪರಶುರಾಮ ಸುಲ್ತಾನಪುರೆ, ಪ್ರಮುಖರಾದ ಸಂತೋಷ ಕುಲಕರ್ಣಿ, ಬಾಬುರಾವ ಸುಳ್ಳದ, ಶಿವಲಿಂಗಮ್ಮ ಲೇಂಗಟಿಕರ್, ಕರಿಮೋದ್ದಿನ್ ಅನ್ಸಾರಿ, ಪಿರ್ದೋಸ್ ಅನ್ಸಾರಿ, ಪಂಡಿತ ಶೇರಿಕರ, ಶಿವಶರಣ ಬಿರಾದಾರ, ಇದ್ರೀಸ್‌ಸಾಬ್ ಅನ್ಸಾರಿ, ಮುಬಾಸಿರ್ ಅನ್ಸಾರಿ, ಉಮರ್ ಅಲಿ, ಸಿದ್ರಾಮಪ್ಪ ಎಳಮೇಲಿ, ಶೇಖ್‌ಆಸೀಪ್ ಅಲಿ, ರಮೇಶ ಶೀಲವಂತ, ಪ್ರವೀಣ್ ಚೌಧರಿ ಇತರರಿದ್ದರು.

ಸಂಘದ ಅಧ್ಯಕ್ಷ ಸುಭಾಷ ಬಳೂರ್ಗಿ ಪ್ರಾಸ್ತಾವಿಕ ಮಾತನಾಡಿದರು. ಅಣವೀರಪ್ಪ ಪಂಚಾಳ ಸ್ವಾಗತಿಸಿದರು. ಕಲ್ಯಾಣಿ ತುಕ್ಕಾಣಿ ನಿರೂಪಣೆ ಮಾಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net