ಕಾರ್ಮಿಕ ದಿನ ಆಚರಣೆ

01Rajesh6
Published on

ಚಾಮರಾಜನಗರ: ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ವತಿಯಿಂದ ನಗರದಲ್ಲಿ ಕಾರ್ಮಿಕ ದಿನ ಆಚರಣೆ ಮಾಡಲಾಯಿತು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಗುರುವಾರ ಬೆಳಗ್ಗೆ ಗುಂಪುಗೂಡಿದ ಕಾರ್ಮಿಕರು ಮಾರಮ್ಮನ ದೇವಸ್ಥಾನದ ಮುಂಭಾಗದವರೆಗೆ ಐತಿಹಾಸಿಕ ಮೇ ದಿನ ಚಿರಾಯುವಾಗಲಿ ಎಂಬ ಬ್ಯಾನರ್, ಎಐಯುಟಿಯುಸಿ ಲಕಗೊಳನ್ನು ಹಿಡಿದುಕೊಂಡು ಮೆರವಣಿಗೆ ನಡೆಸಿದರು.

ಬಳಿಕ ಮಾರಮ್ಮನ ದೇವಸ್ಥಾನದ ಮುಂಭಾಗ ವೇದಿಕೆ ಕಾರ್ಯಕ್ರಮ ನಡೆಯಿತು. ಮೇ 1ರ ಕಾರ್ಮಿಕ ದಿನ ಸಂಭ್ರಮದ ದಿನವಾಗಿದೆ. ತ್ಯಾಗ, ಬಲಿದಾನದಿಂದ ಪಡೆದುಕೊಂಡ ಕಾರ್ಮಿಕ ಹಕ್ಕುಗಳು ದಿನಕಳೆದಂತೆ ದಮನಕ್ಕೆ ಒಳಗಾಗುತ್ತಿವೆ. 8 ತಾಸಿನ ದುಡಿಮೆ ಎನ್ನುವುದು ಕೇವಲ ಪುಸ್ತಕಕ್ಕೆ ಸೀಮಿತವಾಗಿದೆ. ಕನಿಷ್ಠ 10-14 ತಾಸುಗಳ ಕೆಲಸ ಇಂದು ಅಲಿಖಿತ ನಿಯಮವಾಗಿಬಿಟ್ಟಿದೆ ಎಂದರು. ರಾಜ್ಯ ಸಮಿತಿ ಸದಸ್ಯರ ಚಂದ್ರಶೇಖರ್ ಮೇಟಿ, ಕಾರ್ಯದರ್ಶಿಗಳಾದ ಪುಟ್ಟರಾಜು ಶುಗರ್ ಫ್ಯಾಕ್ಟರಿ ಸಂಘದ ಅಧ್ಯಕ್ಷ ಬೃಂಗೇಶ್, ಆಶಾ ಕಾರ್ಯಕರ್ತೆಯ ಸಂಘದ ಜಿಲ್ಲಾಧ್ಯಕ್ಷೆ ಕವಿತಾ ಚಾಮರಾಜನಗರ ಮೆಡಿಕಲ್ ಕಾಲೇಜ್ ಸಂಘದ ಪ್ರಧಾನ ಕಾರ್ಯದರ್ಶಿ ಮಹದೇವ್ ಮತ್ತು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net