

ಇಂಡಿ: ಮೇ ಒಂದು ಅಂತರಾಷ್ಟ್ರೀಯ ಕಾರ್ಮಿಕರ ದಿನ. ಎಲ್ಲ ಕಡೆಗಳಲ್ಲಿ ಆಚರಿಸಲಾಗುತ್ತದೆ ಆದರೆ ಇಲ್ಲಿನ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಕಾರ್ಮಿಕ ದಿನಾಚರಣೆ ಆಚರಿಸದಿರುವುದು ಕಾರ್ಮಿಕ ವರ್ಗದ ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಮೊದಲು ಕಾರ್ಮಿಕರ ದಿನಾಚರಣೆಯ ದಿನ ಕಟ್ಟಡ ಕಾರ್ಮಿಕರು ಎತ್ತಿನ ಬಂಡೆಯ ಕೆಲಸ ಮಾಡುವ ಕಾರ್ಮಿಕರು, ಪುರಸಭೆಯ ಕಾರ್ಮಿಕರು, ಅನೇಕ ಕಾರ್ಮಿಕ ವರ್ಗ ಸೇರಿ ಎತ್ತಿನ ಬಂಡೆಯೊಂದಿಗೆ ಮೆರವಣೆಗೆ ನಡೆಯಿಸಿ ಕಾರ್ಮಿಕರ ದಿನಾಚರಣೆ ಆಚರಿಸುತ್ತಿದ್ದರು. ಆದರೆ ಈ ಬಾರಿ ಆಚರಿಸಲಿಲ್ಲ. ಕನಿಷ್ಠ ಬಾಗಿಲು ತೆಗೆದು ಕಾರ್ಮಿಕ ವರ್ಗಕ್ಕೆ ಗೌರವಿಸುವ ಕಾರ್ಯವನ್ನಾದರೂ ಇಲಾಖೆಯ ಅಧಿಕಾರಿಗಳು ಮಾಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನಲ್ಲಿರುವ ಬೇರೆ ಬೇರೆ ಇಲಾಖೆಯಲ್ಲಿರುವ ಕಾರ್ಮಿಕರನ್ನು ಗುರುತಿಸಿ ಅವರನ್ನು ಗೌರವಿಸಬೇಕಾಗಿತ್ತು. ಅಲ್ಲದೆ ಕಾರ್ಮಿಕರಿಗೆ ಆರೋಗ್ಯ ಕಿಟ್ ವಿತರಿಸಬೇಕಿತ್ತು. ಈ ಬಾರಿ ಮಾತ್ರ ಅದ್ಯಾವುದೂ ನಡಯಲೇ ಇಲ್ಲ.
ಈ ಕುರಿತು ಹಲವಾರು ಕಾರ್ಮಿಕರು ಇಲಾಖೆಗೆ ಬಂದು ತಮ್ಮ ಅತೃಪ್ತಿ ವ್ಯಕ್ತ ಪಡಿಸಿದ್ದಾರೆ. ಮತ್ತು ಕನಿಷ್ಠ ಪ ಇಲಾಖೆ ಬಾಗಿಲು ತೆಗೆದು ಸರಳ ರೂಪದಲ್ಲಾದರೂ ಆಚರಣೆ ಮಾಡಬೇಕಾಗಿತ್ತು ಎಂದು ಕಾರ್ಮಿಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.