ಕಾರ್ತಿಕೋತ್ಸವ ಸಂಪನ್ನ

Deepothsava
Published on

ಚಿತ್ರದುರ್ಗ: ರಂಗಯ್ಯನ ಬಾಗಿಲು ಸಮೀಪದ ಉಜ್ಜಯಿನಿ ಮಠದಲ್ಲಿ ಸೋಮವಾರ ರಾತ್ರಿ ನಡೆದ ಶ್ರೀ ಮರುಳಸಿದ್ದೇಶ್ವರ ಸ್ವಾಮೀಜಿ, ಶ್ರೀ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಕರ್ತೃ ಗದ್ದಿಗೆಯ ಕಡೇ ಕಾರ್ತಿಕ ಮಹೋತ್ಸವ ಸಂಪನ್ನವಾಯಿತು.

ಗದ್ದಿಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ಸೇರಿ ಇತರೆ ಪೂಜೆಗಳು ನಡೆದವು. ಭಕ್ತರು ದೀಪ ಹಚ್ಚಿ ಭಕ್ತಿ ಸಮರ್ಪಿಸಿದರು. ನಂತರ ಪ್ರಸಾದ ವಿತರಿಸಲಾಯಿತು.

ಮಳೆ ಮಲ್ಲಿಕಾರ್ಜುನ ಶ್ರೀ, ಶ್ರೀಮಠದ ಅಭಿಷೇಕ ದೇವರು, ಕಾರ್ಯದರ್ಶಿ ಯು.ಎಂ.ಆರ್.ಈಶ್ವರ ಪ್ರಸಾದ್, ಮನೋಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net