ಕಾರ್ತಿಕ ಜ್ಞಾನದ ಸಂಕೇತ

18 ckm 1
ಚಿಕ್ಕಮಗಳೂರು ತಾಲೂಕಿನ ಚಿಕ್ಕೊಳಲೆ ಸದಾಶಿವಶಾಸ್ತಿç ಸಭಾಂಗಣದಲ್ಲಿ ಶ್ರೀ ಪಾರ್ವತಿ ಮಹಿಳಾ ಮಂಡಳಿ ಆಯೋಜಿಸಿದ್ದ ಕಾರ್ತಿಕ ಸಂಭ್ರಮ ಕಾರ್ಯಕ್ರಮವನ್ನುz್ದೆÃಶಿಸಿ ಸಾಮಾಜಿಕ ಕಾರ್ಯಕರ್ತೆ ಮಂಗಳಾ ಎಚ್.ಡಿ.ತಮ್ಮಯ್ಯ ಮಾತನಾಡಿದರು. ಸುಮಿತ್ರಾ ಶಾಸ್ತಿç, ಸಿದ್ಧವೀರಮ್ಮ, ಶೈಲಾ ಬಸವರಾಜು, ಪುಷ್ಪಾ ಕುಮಾರಸ್ವಾಮಿ, ನೇತ್ರಾ ಮಹೇಶ್, ರುಕ್ಮಿಣಿ ಹರೀಶ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಕಾರ್ತಿಕ ದೇವರ ಮಾಸ. ಈ ಮಾಸ ಜ್ಞಾನದ ಸಂದೇಶ ನೀಡುತ್ತದೆ. ದೀಪಾವಳಿ ಸಂತೋಷ ಸಂಭ್ರಮದ ಜನಪ್ರಿಯ ಅರ್ಥಪೂರ್ಣ ಹಬ್ಬ ಎಂದು ಸಮಾಜಿಕ ಕಾರ್ಯಕರ್ತೆ ಮಂಗಳಾ ಎಚ್.ಡಿ.ತಮ್ಮಯ್ಯ ಅಭಿಪ್ರಾಯಪಟ್ಟರು.

ಶ್ರೀ ಪಾರ್ವತಿ ಮಹಿಳಾ ಮಂಡಳಿಯು ಚಿಕ್ಕೊಳಲೆ ಸದಾಶಿವಶಾಸ್ತಿç ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೀಪೋತ್ಸವ, ತುಳಸಿಹಬ್ಬ, ಲಕ್ಷಿö್ಮÃ ಪೂಜೆ ಕಾರ್ತಿಕ ಮಾಸದಲ್ಲಿ ಬರುತ್ತದೆ. ಈ ಮಾಸದಲ್ಲಿ ಮದುವೆ, ಗೃಹಪ್ರವೇಶ ಸೇರಿದಂತೆ ಶುಭಕಾರ್ಯಗಳು ನಡೆದರೆ ಶ್ರೇಯಸ್ಸು ಎಂಬ ನಂಬಿಕೆ ಇದೆ. ಎಲ್ಲ ದೇವಾಲಯಗಳಲ್ಲಿ ವಿಶೇಷಪೂಜೆ, ಅಲಂಕಾರ, ಅಭಿಷೇಕ, ದೀಪಾರಾಧನೆ, ಗಾಯನ, ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ವಿಶೇಷವಾಗಿ ಶಿವ ದೇವಾಲಯಗಳಲ್ಲಿ ಮಾಸಪೂರ್ಣ ಕಾರ್ಯಕ್ರಮಗಳಿರುತ್ತವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಂದಿರಗಳಿಗೆ ಭೇಟಿ ನೀಡಿ ಆನಂದಿಸುವ ಸಂದರ್ಭವಿದು ಎಂದರು.

ದೀಪಾವಳಿ ಬೆಳಕಿನ ಹಬ್ಬ. ದೇಶಾದ್ಯಂತ ಬೇರೆ ಬೇರೆ ರಾಜ್ಯಗಳು ಹಾಗೂ ಸªಮುದಾಯಗಳು-ಧರ್ಮಗಳು ತಮ್ಮದೇ ಆದ ರೀತಿಯಲ್ಲಿ ಸಂಭ್ರಮಿಸುವ ಪದ್ಧತಿ ಇದೆ. ಶ್ರೀರಾಮ ೧೪ವರ್ಷ ವನವಾಸ ಮುಗಿಸಿ ಹಿಂತಿರುಗಿದಾಗ ಪ್ರಜೆಗಳು ಮಣ್ಣಿನ ಹಣತೆಗಳನ್ನು ಹಚ್ಚಿ ಪಟಾಕಿ ಸಿಡಿಸಿ, ತಳಿರು ತೋರಣದೊಂದಿಗೆ ಬರಮಾಡಿಕೊಂಡು ಸಂಭ್ರಮಿಸಿದ ದಿನವಿದು. ಶ್ರೀವಿಷ್ಣು ವಾಮನ ಅವತಾರ ತಾಳಿ ಬಲಿಚಕ್ರವರ್ತಿಯನ್ನು ವಧಿಸಿದ ದಿನವಿದು. ಕೆಲವರಿಗೆ ಹೊಸ ಲೆಕ್ಕ ಆರಂಭಿಸುವ ಆರ್ಥಿಕ ಚಟುವಟಿಕೆಯ ಆರಂಭಿಕ ದಿನವೂ ಆಗಿದೆ ಎಂದು ಹೇಳಿದರು.

ಮಲೆನಾಡು ಪ್ರಾಂತ್ಯದಲ್ಲಿ ದೀಪಾವಳಿ ಹೆಚ್ಚು ಜನಪ್ರಿಯ ಶ್ರದ್ಧೆಯ ಹಬ್ಬವಾಗಿದೆ. ಬೆಟ್ಟದಲ್ಲಿ ನೆಲೆಸಿರುವ ಶ್ರೀದೇವಿರಮ್ಮ ತಾಯಿಯನ್ನು ದರ್ಶಿಸುವ, ಅಲ್ಲಿ ರಾತ್ರಿ ಬೆಳಗುವ ದೀಪವನ್ನು ಕಣ್ತುಂಬಿಕೊAಡು ಆರತಿ ಬೆಳಗುವ ಅದೃಷ್ಟ ನಮ್ಮದಾಗಿದೆ. ದೀಪ ಮನೆ-ಮನಗಳನ್ನು ಬೆಳಗಿ ಉಲ್ಲಾಸಗೊಳಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಾರ್ವತಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಮಿತ್ರಾ ಶಾಸ್ತಿç ಮಾತನಾಡಿ, ದೀಪ ಜ್ಞಾನದ ಸಂಕೇತ. ಭಾರತೀಯ ಸಂಸ್ಕೃತಿಯಲ್ಲಿ ಕಾರ್ತಿಕಮಾಸಕ್ಕೆ ಬಹಳಷ್ಟು ಮಹತ್ವವಿದೆ. ಮಠ, ಮಂದಿರ, ಮನೆ-ಮನಗಳಲ್ಲಿ ದೀಪ ಹಚ್ಚಿ ದೇವತಾರಾಧನೆ ಮಾಡುತ್ತಾರೆ. ಹೊರಗಿನ ಕತ್ತಲೆ ಕಳೆಯಲು ಸೂರ್ಯ ಇರುವಂತೆ ನಮ್ಮ ಅಜ್ಞಾನ ಕಳೆಯಲು ಗುರುದೇವ ಇರಬೇಕು. ದೀಪ ಬೆಳಗುವುದರಿಂದ ಐಶ್ವರ್ಯ, ಸಂಪತ್ತು, ಆರೋಗ್ಯ ಸ್ಥಿರವಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಸಂಘದ ಹಿರಿಯ ಸದಸ್ಯೆ ಸಿದ್ಧವೀರಮ್ಮ ಉದ್ಘಾಟಿಸಿದರು. ಉಪಾಧ್ಯಕ್ಷೆ ಶೈಲಾ ಬಸವರಾಜು, ಪ್ರಮುಖರಾದ ಪುಪ್ಪಾ ಕುಮಾರಸ್ವಾಮಿ, ನೇತ್ರಾ ಮಹೇಶ್, ರುಕ್ಮಿಣಿ ಹರೀಶ್, ಪಾರ್ವತಮ್ಮ ರುದ್ರಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net