ಕಾರ್ಗಿಲ್ ಹೋರಾಟ ಯೋಧರ ಶೌರ್ಯಕ್ಕೆ ಸಾಕ್ಷಿ

27Kush04 (1)
ಕೂಡಿಗೆ ಸೈನಿಕ ಶಾಲೆ ಆವರಣದಲ್ಲಿರುವ ವೀರ ಯೋಧರ ಸ್ಮಾರಕಕ್ಕೆ ಪ್ರಾಂಶುಪಾಲ ಕರ್ನಲ್.ಜಿ.ಕಣ್ಣನ್ ಗೌರವ ವಂದನೆ ಸಲ್ಲಿಸಲು ಆಗಮಿಸುತ್ತಿರುವುದು.
Published on

ಕುಶಾಲನಗರ: ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯ ಶೌರ್ಯವನ್ನು ಸ್ಮರಿಸುವುದು ಅತ್ಯಗತ್ಯ ಎಂದು ಮಹಾವೀರ ಚಕ್ರ ಪ್ರಶಸ್ತಿ ಪುರಸ್ಕೃತ ಪಿ.ಎಸ್.ಗಣಪತಿ ಹೇಳಿದರು.

ಕೂಡಿಗೆ ಸೈನಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ 24ನೇ ಕಾರ್ಗಿಲ್ ವಿಜಯ್ ದಿವಸ ಸಂಭ್ರಮಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕಾರ್ಗಿಲ್ ಹೋರಾಟ ಸೈನಿಕರ ಮನೋಭಾವ ಮತ್ತು ಶೌರ್ಯಕ್ಕೆ ಸಾಕ್ಷಿ ಎಂದರು.

ಶ್ರೀಲಂಕಾದಲ್ಲಿ ರಾಜಕೀಯ ಸ್ಥಿರತೆ ಕಾಪಾಡುವಲ್ಲಿ ಭಾರತೀಯ ಸೇನೆಯ ಪಾತ್ರ ಮಹತ್ವವಾದದ್ದು. ಹಾಗಾಗಿ ಪ್ರತಿಯೊಬ್ಬರೂ ಭಾರತೀಯ ಸೇನೆಗೆ ಸೇರುವ ಮೂಲಕ ತಾಯ್ನಡಿನ ಸೇವೆಗೆ ಮುಂದಾಗಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

1999ರಲ್ಲಿ ಆಪರೇಷನ್ ವಿಜಯ್ ಸಂದರ್ಭದಲ್ಲಿ ರಾಷ್ಟ್ರದ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡುವಲ್ಲಿ ಭಾರತೀಯ ವೀರ ಯೋಧರ ಧೈರ್ಯ ಶ್ಲಾಘನೀಯ. ಈ ನಿಟ್ಟಿನಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳೂ ಸನ್ನದ್ಧವಾಗಬೇಕು ಎಂದು ಶಾಲೆ ಪ್ರಾಂಶುಪಾಲ ಕರ್ನಲ್.ಜಿ.ಕಣ್ಣನ್ ಹೇಳಿದರು.

ಇದಕ್ಕೂ ಮುನ್ನ ಶಾಲೆ ಆವರಣದಲ್ಲಿರುವ ವೀರಯೋಧರ ಸ್ಮಾರಕಕ್ಕೆ ಶಾಲೆ ಪ್ರಾಂಶುಪಾಲ ಕರ್ನಲ್.ಜಿ.ಕಣ್ಣನ್ ಪುಷ್ಪಗುಚ್ಛ ಸಮರ್ಪಿಸುವ ಮೂಲಕ ಗೌರವ ವಂದನೆ ಸಲ್ಲಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ.ಪ್ರಕಾಶ್‌ರಾವ್, ಉಪಪ್ರಾಂಶುಪಾಲ ಮನ್‌ಪ್ರೀತ್‌ಸಿಂಗ್, ಶಾಲೆಯ ಸಿ ಘಟಕದ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net