ಕಾರ್ಗಿಲ್ ಶೌರ್ಯ, ತ್ಯಾಗದ ಸಂಕೇತ

kpp krgill
ಶೃಂಕೋನ ಮಾಜಿ ಸೈನಿಕರ ಸಂಘದಿಂದ ಕೊಪ್ಪಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
Published on

ಕೊಪ್ಪ: ಕಾರ್ಗಿಲ್ ಯುದ್ಧ ಸೈನಿಕರ ಶೌರ್ಯ ಹಾಗೂ ತ್ಯಾಗದ ಸಂಕೇತ ಎಂದು ಶೃಂಕೋನ ಮಾಜಿ ಸೈನಿಕ ಸಂಘದ ಗೌರವಾಧ್ಯಕ್ಷ ಗೋಪಾಲ್ ಶೆಟ್ಟಿ ಹೇಳಿದರು.

ಬಸ್ ನಿಲ್ದಾಣದಲ್ಲಿ ಶೃಂಕೋನ ಮಾಜಿ ಸೈನಿಕರ ಸಂಘದಿಂದ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, 1999ರ ಮೇನಲ್ಲಿ ಆರಂಭವಾದ ಯುದ್ಧ ಜುಲೈನಲ್ಲಿ ಕೊನೆಯಾಯಿತು. ಜು.26ರಂದು ನಾವು ಗೆಲುವು ಪಡೆದೆವು.

ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ ಎಂದು ಹೇಳುತ್ತೇವೆ. ಭಾರತದ ಮುಕುಟ ಸಂಪೂರ್ಣವಾಗಿ ಭಾರತದ ಕೈಯಲ್ಲಿ ಇಲ್ಲ. ಪಾಕಿಸ್ತಾನ ಆಕ್ರಮಿಸಿಕೊಂಡಿದ್ದು, ಅದನ್ನು ವಶಪಡಿಸಿಕೊಳ್ಳಬೇಕಿದೆ ಎಂದರು.

ಶೃಂಕೋನ ಮಾಜಿ ಸೈನಿಕ ಸಂಘದ ಅಧ್ಯಕ್ಷ ಕೆ.ಎ.ದೇವೀಶ್, ಉಪಾಧ್ಯಕ್ಷ ಸುಬ್ಬಣ್ಣ ನಾಯ್ಕ, ಸದಸ್ಯರಾದ ಚಂದ್ರಶೇಖರ್, ಎನ್.ಕೆ. ವಿಜಯ್, ಕಸಾಪ ಅಧ್ಯಕ್ಷ ಜೆ.ಎಂ.ಶ್ರೀಹರ್ಷ, ಲಯನ್ಸ್ ಕ್ಲಬ್ ಅಧ್ಯಕ್ಷ ದೇವರಾಜ್ ಕೌಳಿ, ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಹೊಸೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net