ಕಾರ್ಗಿಲ್ ವಿಜಯ್ ದಿವಸ್ ಆಚರಣೆ

26Kush02 (1)
ಕುಶಾಲನಗರದ ಹುಣ್ಣಸವಾಡಿ ಸರ್ಕಲ್ನಲ್ಲಿರುವ ವೀರಯೋಧರ ಪ್ರತಿಮೆ ಬಳಿ ಬುಧವಾರ ಲಯನ್ಸ್ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು. ಸುಮನ್, ಬಾಲಚಂದರ್, ಟಿ.ಕೆ.ರಾಜಶೇಖರ್, ಸತೀಶ ಕುಮಾರ್, ಪಿ.ಎಂ.ಮೋಹನ್, ಡಾ.ಪ್ರವೀಣ್ ಕುಮಾರ್ ಇತರರು ಇದ್ದರು.
Published on

ಕುಶಾಲನಗರ: ಕುಶಾಲನಗರ ಲಯನ್ಸ್ ಕ್ಲಬ್ ವತಿಯಿಂದ ಬುಧವಾರ ಕಾರ್ಗಿಲ್ ವಿಜಯ್ ದಿವಸ್ ಅನ್ನು ಹುಣ್ಣಸವಾಡಿ ಸರ್ಕಲ್ನಲ್ಲಿ ಇರುವ ವೀರಯೋಧರ ಪ್ರತಿಮೆ ಬಳಿ ಆಚರಿಸಲಾಯಿತು.

ಕ್ಲಬ್ನ ನಿಕಟಪೂರ್ವ ಅಧ್ಯಕ್ಷ, ಮಾಜಿ ಯೋಧ ಬಿ.ಕೆ.ಚಿಣ್ಣಪ್ಪ ಅವರು ಕಾರ್ಗಿಲ್ ಯುದ್ಧ ಸಂದರ್ಭವನ್ನು ಎಳೆಎಳೆಯಾಗಿ ವಿವರಿಸಿದರು.

ಗ್ರಾಮಸ್ಥರು, ಪ್ರವಾಸಿಗರಿಗೆ ಇದೇ ಸಂದರ್ಭ ಸಿಹಿ ಹಂಚಲಾಯಿತು. ಸಂಸ್ಥೆ ಅಧ್ಯಕ್ಷ ಸುಮನ್, ಪದಾಧಿಕಾರಿಗಳಾದ ಬಾಲಚಂದರ್, ಟಿ.ಕೆ.ರಾಜಶೇಖರ, ನಿತಿನ್‌ಗುಪ್ತ, ಕೆ.ಎಸ್.ಸತೀಶ ಕುಮಾರ್, ಪಿ.ಎಂ.ಮೋಹನ್, ಹರ್ಷ, ಡಾ.ಪ್ರವೀಣ್ ಕುಮಾರ್, ಡಾ.ಶರತ್ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net