ಕಾರ್ಗಿಲ್ ವಿಜಯೋತ್ಸವ ಸ್ವಾಭಿಮಾನ ಸಂಕೇತ

26-7jvg01 NEW
ಕಾರ್ಗಿಲ್ ವಿಜಯ ದಿವಸ್ ನಿಮಿತ್ತ ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಶ್ರೀ ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ಮಂಗಳವಾರ ಜೇವರ್ಗಿಯಲ್ಲಿ ಒಂದು ಕಿಲೋಮೀಟರ್ ಉದ್ದದ ತಿರಂಗಾ ಧ್ವಜ ಮೆರವಣಿಗೆ ವೈಭವದಿಂದ ಜರುಗಿತು.
Published on

ಜೇವರ್ಗಿ (ಕಲಬುರಗಿ): ಕಾರ್ಗಿಲ್ ವಿಜಯೋತ್ಸವ ದೇಶದ ಸ್ವಾಭಿಮಾನದ ಸಂಕೇತವಾಗಿದ್ದು, ದೇಶದ ಪ್ರತಿಯೊಬ್ಬ ನಾಗರಿಕ ವಿಜಯೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ದೇಶಾಭಿಮಾನ ಮತ್ತು ದೇಶಭಕ್ತಿ ಬೆಳೆಸಿಕೊಳ್ಳಬೇಕು ಎಂದು ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಶ್ರೀ ಹವಾ ಮಲ್ಲಿನಾಥ ಮಹಾರಾಜ(ನಿರಗುಡಿ ಮುತ್ತ್ಯಾ) ಹೇಳಿದರು.

ಭೂತಪೂರ ಕಲ್ಯಾಣ ಮಂಟಪದಲ್ಲಿ ಸಮಿತಿ ಮಂಗಳವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಕಾಗರ್ಿಲ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಸೇವೆ ಅವಿಸ್ಮರಣೀಯ. ದೇಶದ ರಕ್ಷಣೆಗೆ ತಮ್ಮ ಜೀವ ಮುಡಿಪಾಗಿಟ್ಟು ಸೇವೆ ಸಲ್ಲಿಸುವ ಸೈನಿಕರಿಗೆ ಪ್ರತಿಯೊಬ್ಬರೂ ಋಣಿಯಾಗಿರಬೇಕು. ಇಂತಹ ಮಹಾನ್ ಸೇವೆಯಲ್ಲಿ ತೊಡಗಿರುವ ಯೋಧರಿಗೆ ಗೌರವದಿಂದ ಕಾಣಬೇಕು ಎಂದು ಕರೆ ನೀಡಿದರು.

ಸಮಿತಿ ರಾಷ್ಟ್ರೀಯ ವಕ್ತಾರ ವೈಜಿನಾಥ ಝಳಕಿ, ಜೈ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ಪ್ರಮುಖರಾದ ಸೈಯದ್ ಜಾಫರ್ ಹುಸೇನ್, ಸಂದೇಶ ಪವಾರ್, ಮಾಲಾ ಬಿ.ನಾರಾಯಣರಾವ, ರಾಜಶೇಖರ ಸಿರಿ, ರೌಫ್ ಹವಾಲ್ದಾರ್, ತಿಪ್ಪಣ್ಣ ರಾಠೋಡ್, ರಮೇಶ ರಾಠೋಡ್ ರೇವನೂರ, ಪೀರಪ್ಪ ಯಾತನೂರ, ಈಶ್ವರ ಹಿಪ್ಪರಗಿ, ರವಿಚಂದ್ರ ಗುತ್ತೇದಾರ್, ಗುರುನಾಥ ಮದ್ದರಕಿ, ಸುಧೀಂದ್ರ ಇಜೇರಿ, ಮಲ್ಲಿಕಾರ್ಜುನ ಬಿರೆದಾರ ಗೌನಳ್ಳಿ, ಚಂದ್ರಶೇಖರ ನೇರಡಗಿ, ರಾಜಶೇಖರ ಮುತ್ತಕೋಡ, ಬಸವರಾಜ ಬಾಗೇವಾಡಿ, ಮರೆಪ್ಪ ಸರಡಗಿ, ವೀರೇಶ ಪಾಟೀಲ್ ಆಲೂರ, ಶಂಕರ ವಾರದ ಸೇರಿ ನೂರಾರು ಜನ ಭಾಗವಹಿಸಿದ್ದರು.

ಇದಕ್ಕೂ ಮುನ್ನ ಪಟ್ಟಣದ ರಿಲಾಯನ್ಸ್ ಪೆಟ್ರೋಲ್ ಬಂಕ್​ನಿಂದ ಯುದ್ಧದಲ್ಲಿ ವೀರಮರಣ ಹೊಂದಿದ ಸೈನಿಕರ ಭಾವಚಿತ್ರಗಳೊಂದಿಗೆ ಒಂದು ಕಿಲೋಮೀಟರ್ ಉದ್ದದ ತಿರಂಗಾ ಧ್ವಜದ ಭವ್ಯ ಮೆರವಣಿಗೆ ನಡೆಯಿತು. ಮಾರ್ಗದುದ್ದಕ್ಕೂ ವಿದ್ಯಾರ್ಥಿಗಳು ಹಾಗೂ ಯುವಕರು ದೇಶಾಭಿಮಾನ ಮೂಡಿಸುವಂಥ ಜಯಘೋಷಗಳನ್ನು ಮೊಳಗಿಸಿದರು.

ದೇಶಕ್ಕಿಂತ ದೊಡ್ಡದು ಅಥವಾ ಮಹತ್ವದ್ದು ಯಾವುದೂ ಇಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಂಡು ಹೆಜ್ಜೆ ಇಡಬೇಕು. ನಮ್ಮೆಲ್ಲರ ರಕ್ಷಣೆಗಾಗಿ ದೇಶದ ಗಡಿಯಲ್ಲಿ ಸೇವೆ ಸಲ್ಲಿಸುವ ಸೈನಿಕರು ಮತ್ತು ಕಾಗರ್ಿಲ್ ಕದನದಲ್ಲಿ ವೀರಮರಣ ಹೊಂದಿದ ಯೋಧರಿಗೆ ಬಗ್ಗೆ ಹ್ಯಾಟ್ಸಾಫ್.
| ಶ್ರೀ ಹವಾ ಮಲ್ಲಿನಾಥ ಮಹಾರಾಜ
ಜೈಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net