

ದಾವಣಗೆರೆ: ಕಾರ್ಗಿಲ್ ಯುದ್ಧದಲ್ಲಿ ಪಾಕ್ ಆಕ್ರಮಿತ ಟೋಲೋಲಿಂಗ್ ಪರ್ವತವನ್ನು 1999ರಲ್ಲಿ ವಶಪಡಿಸಿಕೊಳ್ಳುವಲ್ಲಿ, ರಜಪೂತಾನ ರೈಫಾಲ್ಸ್‌ನ ಕಮಾಂಡೆಂಟ್ ಆಗಿದ್ದ ಕರ್ನಲ್ ರವೀಂದ್ರನಾಥ್ ನೇತೃತ್ವದ ಸೇನೆ ಯಶಸ್ಸು ಗಳಿಸಿತ್ತು. ದಾವಣಗೆರೆಯ ಎಸ್. ನಿಜಲಿಂಗಪ್ಪ ಬಡಾವಣೆಯ ಅಮರ್ ಜವಾನ್ ಉದ್ಯಾನ ಸಮೀಪದ ವೃತ್ತಕ್ಕೆ ಅವರ ಹೆಸರನ್ನು ಶನಿವಾರ ನಾಮಕರಣ ಮಾಡಲಾಯಿತು.