

ಕಾರ್ಗಲ್: ಮಹಾತ್ಮ ಗಾಂ ಮತ್ತು ಲಾಲ್ ಬಹದೂರ್ ಶಾಸ್ತ್ರಿ ಜಯಂತಿ ಆಚರಣೆ ಅಂಗವಾಗಿ ಶರಾವತಿ ವರ್ತಕರ ಸಂಘದಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಒಟ್ಟು ಇಪ್ಪತ್ತು ಮಂದಿ ಪೌರ ಕಾರ್ಮಿಕರಿಗೆ ಶಾಲು ಹೊದಿಸಿ ಮಾಲಾರ್ಪಣೆ ಮಾಡಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ವರ್ತಕರ ಸಂಘದ ಅಧ್ಯಕ್ಷ ಪಾರ್ಶ್ವನಾಥ ಜೈನ್, ಗಾಂ ಜಯಂತಿಯಂದು ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಸ್ವಚ್ಛತಾ ದಿನವನ್ನಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಗಿದೆ ಎಂದರು. ವರ್ತಕರ ಸಂಘದ ಕಾರ್ಯದರ್ಶಿ ಪ್ರಸನ್ನ ಶೇಟ್, ಪದಾಕಾರಿಗಳಾದ ಜಾಕೀರ್ ಹುಸೇನ್, ಟಿ.ಸುರೇಶ್, ಹಾಜಿ ಬಾಷಾ ಸಾಬ್, ರವೀಶ್ ಶೆಟ್ಟಿ, ಸ್ಮೆಲ್ ಬಷೀರ್, ಯು.ಜಿ.ರಾಘವೇಂದ್ರ, ಶಿಯಾಬ್, ಸಂತೋಷ್ ಶೆಟ್ಟಿ, ಶಂಕರ್ ನಾಯ್ಕ ಮುಂತಾದವರಿದ್ದರು.