ಕಾರ್ಗಲ್ ಪಪಂ ಸದಸ್ಯರಿಂದ ಸಭಾತ್ಯಾಗ

04kgl07
ಕಾರ್ಗಲ್ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ರಾಜು ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆ. ಜಯಲಕ್ಷ್ಮೀ, ಎಂ.ಕೆ.ಸುರೇಶ್, ಬಾಲಸುಬ್ರಹ್ಮಣ್ಯ ಇತರರಿದ್ದರು.
Published on

ಕಾರ್ಗಲ್: ಅನುದಾನ ಹಂಚಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಬಿಜೆಪಿಯ ಐವರು ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿ, ಸಭಾತ್ಯಾಗ ಮಾಡಿದ ಘಟನೆ ಗುರುವಾರ ಪಟ್ಟಣ ಪಂಚಾಯಿತಿ ಮಾಸಿಕ ಸಭೆಯಲ್ಲಿ ನಡೆಯಿತು.

ಮಾಸಿಕ ಸಭೆ ಆರಂಭವಾದ ಕೆಲಹೊತ್ತಿನಲ್ಲೇ ಸಭೆಯಲ್ಲಿ ಅವಿಶ್ವಾಸ ಮಂಡನಾ ಪತ್ರವನ್ನು ಓದಿದ ಸದಸ್ಯ ಉಮೇಶ್ ಕೆಮ್ಮಣಗಾರು, ಅಧ್ಯಕ್ಷರು ಸರ್ವಾಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿದರು. ಸದಸ್ಯರ ವಿಶ್ವಾಸ ಪಡೆಯದೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಎಂ.ರಾಜು ಅವರು ಮುಂದುವರಿಯದಂತೆ ಐವರು ಸದಸ್ಯರಾದ ಉಮೇಶ್, ವಾಸಂತಿ ರಮೇಶ್, ನಾಗರಾಜ್ ವಾಟೆಮಕ್ಕಿ, ಬಾಲಸುಬ್ರಹ್ಮಣ್ಯ ಹಾಗೂ ಲಲಿತಾ ಮಂಜುನಾಥ್ ಕ್ಕಾರ ಕೂಗಿ ಸಭಾತ್ಯಾಗ ಮಾಡಿದರು. ಐವರು ಸದಸ್ಯರು ಸಭಾತ್ಯಾಗ ನಡೆಸಿದ ನಂತರ ಸಭೆ ಮುಂದುವರಿಯಿತು.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ರಾಜು ಯಾವ ಸದಸ್ಯರಿಗೂ ತಾರತಮ್ಯ ಮಾಡಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣಲಾಗಿದೆ. ಆದರೆ ಬಿಜೆಪಿ ಸದಸ್ಯರು ಅನಗತ್ಯ ಆರೋಪ ಮಾಡುವುದು ಸರಿಯಲ್ಲ, ಕೆಲವೊಮ್ಮೆ ಊರಿನ ಅಭಿವೃದ್ಧಿ ಹಿತದೃಷ್ಟಿಯಿಂದ ನಿರ್ಧಾರ ಅನಿವಾರ್ಯ ಎಂದು ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಜಯಲಕ್ಷ್ಮೀ, ಮುಖ್ಯಾಕಾರಿ ಎಂ.ಕೆ.ಸುರೇಶ್, ಸದಸ್ಯರಾದ ಬಾಲಸುಬ್ರಹ್ಮಣ್ಯ, ಉಮೇಶ್, ನಾಗರಾಜ್ ವಾಟೆಮಕ್ಕಿ, ವಾಸಂತಿ ರಮೇಶ್, ಲಲಿತಾ ಮಂಜುನಾಥ್, ಪಿ.ಮಂಜುನಾಥ್, ಲಕ್ಷ್ಮೀರಾಜು, ಸುಜಾತಾ ಜೈನ್, ಕೆ.ಸಿ.ಹರೀಶ್, ಶ್ರೀಧರ್ ಲಿಂಗನಮಕ್ಕಿ, ಸತೀಶ್ ಮಹಾಲೆ, ಶ್ರೀಲತಾ ಸತ್ಯನ್, ಇಂಜಿನಿಯರ್ ಸುಭಾಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net