

ಕಾರ್ಗಲ್: ತೀರ್ಥಹಳ್ಳಿಯ ಸುವರ್ಣ ಸಹಕಾರ ಭವನದಲ್ಲಿ ಆಯೋಜಿಸಿದ್ದ ದಕ್ಷಿಣ ಭಾರತದ ರಾಜ್ಯಗಳ ಆಹ್ವಾನಿತ ಕರಾಟೆ ಪಂದ್ಯಾವಳಿಯ ತುಂಗಾ ಟ್ರೋಫಿ-2025ರ ಸ್ಪರ್ಧೆಯಲ್ಲಿ ಕಾರ್ಗಲ್‌ನ ಎಂಟು ಮಕ್ಕಳು ಒಟ್ಟು 12 ಪದಕಗಳನ್ನು ಗಳಿಸಿದ್ದಾರೆ. ಕರ್ನಾಟಕ ಒಕಿನವನ್ ಶೋರಿನ್-ರ್ಯೊ ಕರಾಟೆ ಡೊ ಅಸೋಸಿಯೇಷನ್ ತೀರ್ಥಹಳ್ಳಿ ಹಾಗೂ ಶಿವಮೊಗ್ಗ ಜಿಲ್ಲಾ ಕರಾಟೆ ಡೊ ಸ್ಪೋರ್ಟ್ಸ್ ಅಸೋಸಿಯೇಷನ್‌ನಿಂದ ಆಯೋಜಿಸಲಾಗಿತ್ತು. ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಕಾರ್ಗಲ್‌ನ ಗೌತಮ್, ನೇಸರಾ ಶೆಟ್ಟಿ, ತಮನ್ನಾ ಜೈನ್, ಧನ್ವಿತ್, ಪ್ರಣವ್ ಶೇಟ್, ಪೃಥ್ವಿಕ್ ಶೇಟ್, ಲಿಖಿತ್ ಹಾಗೂ ಪೃಥ್ವಿಕ್ ಸೇರಿ ಎಂಟು ಮಕ್ಕಳು ಒಟ್ಟು ನಾಲ್ಕು ಚಿನ್ನ, ಆರು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗಳಿಸಿದ್ದಾರೆ. ಕರಾಟೆ ಪಟುಗಳಿಗೆ ಎಂ.ಎಸ್.ಜನಾರ್ದನ್ ತರಬೇತಿ ನೀಡಿದ್ದರು.