

ಗೋಕಾಕ: ಈ ಭಾಗದ ರೈತರ ಜೀವನಾಡಿಯಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಸದಾ ಬದ್ಧ. ರೈತರು ಹಾಗೂ ಕಾರ್ಮಿಕರ ಏಳಿಗೆಗೆ ಶ್ರಮಿಸಲು ಸಿದ್ಧ. ಕಾರ್ಖಾನೆ ಅಭಿವೃದ್ಧಿಯಲ್ಲಿ ರೈತರ ಸಹಕಾರ ಅಗತ್ಯ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯಿಂದ ಶುಕ್ರವಾರ ಸತ್ಕಾರ ಸ್ವೀಕರಿಸಿ ಮಾತನಾಡಿ, ಈ ಕಾರ್ಖಾನೆಯನ್ನು ಮಾದರಿಯಾಗಿ ಪರಿವರ್ತಿಸುವ ಮಹತ್ವಾಕಾಂಕ್ಷಿ ಹೊಂದಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲೇ ಸಹಕಾರಿ ತತ್ತ್ವದಡಿ ಸ್ಥಾಪಿತಗೊಂಡಿರುವ ಈ ಕಾರ್ಖಾನೆಯ ಉನ್ನತಿ ಮತ್ತು ಪ್ರಗತಿಗಾಗಿ ನಾವೆಲ್ಲರೂ ಶ್ರಮಿಸುತ್ತೇವೆ. ಆಡಳಿತ ಮಂಡಳಿ ಸದಸ್ಯರು, ರೈತರು ಹಾಗೂ ನೌಕರರ ಹಿತಾಸಕ್ತಿಗೆ ಬದ್ಧರಾಗಿ ಕರ್ತವ್ಯ ನಿರ್ವಹಿಸುವಂತೆ ಮಂಡಳಿಗೆ ಸೂಚಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಕಾರ್ಖಾನೆ ಆಡಳಿತ ಮಂಡಳಿ ಪರವಾಗಿ ಅಧ್ಯಕ್ಷ ಅಶೋಕ ಪಾಟೀಲ ಸತ್ಕರಿಸಿದರು.
ಕಾರ್ಖಾನೆ ಅಧ್ಯಕ್ಷ ಅಶೋಕ ಪಾಟೀಲ, ಉಪಾಧ್ಯಕ್ಷ ರಾಮಣ್ಣ ಮಹಾರಡ್ಡಿ, ನಿರ್ದೇಶಕ ಮಂಡಳಿ ಸದಸ್ಯರಾದ ಕೆಂಚನಗೌಡ ಪಾಟೀಲ, ಗಿರೀಶ ಹಳ್ಳೂರ, ಜಗದೀಶ ಬಂಡ್ರೊಳ್ಳಿ, ಬಸನಗೌಡ ಪಾಟೀಲ, ಭೂತಪ್ಪ ಗೋಡೇರ, ಮಲ್ಲಿಕಾರ್ಜುನ ಕಬ್ಬೂರ, ಮಹಾದೇವಪ್ಪ ಭೋವಿ, ಮಾಳಪ್ಪ ಜಾಗನೂರ, ಯಲ್ಲವ್ವ ಸಾರಾಪುರ, ಲಕ್ಕವ್ವ ಬೆಳಗಲಿ, ಲಕ್ಷ್ಮಣ ಗಣಪ್ಪಗೋಳ, ಶಿದ್ಲಿಂಗಪ್ಪ ಕಂಬಳಿ, ಶಿವಲಿಂಗಪ್ಪ ಪೂಜೇರಿ ಇತರರು ಇದ್ದರು.