ಕಾರ್​ ಮೇಲೆ ಲಾರಿ ಪಲ್ಟಿ

15 Jaggu 2
Published on

ಬೆಳಗಾವಿ: ನಗರದ ಕೆಎಲ್​ಇ ಆಸ್ಪತ್ರೆ ಸಮೀಪದ ಪುಣೆ&ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವೀಸ್​ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಮೇಲೆ ಕಾಂಕ್ರಿಟ್​ ಮಿಕ್ಸರ್​ ವಾಹನ ಉರುಳಿ ಬಿದ್ದ ಟನೆ ಶನಿವಾರ ಸಂಭವಿಸಿದ್ದು, ಕಾರಿನಲ್ಲಿದ್ದ ಇಬ್ಬರೂ ಪವಾಡರೀತಿಯಲ್ಲಿ ಪಾರಾಗಿದ್ದಾರೆ.

ಧಾರವಾಡ ಮೂಲದ ಪರಪ್ಪ ಬಾಳಿಕಾಯಿ, ನಿಂಗಪ್ಪ ಕೊಪ್ಪದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಕಾರಿನಲ್ಲಿ ಧಾರವಾಡದಿಂದ ಬೆಳಗಾವಿಗೆ ಬರುತ್ತಿದ್ದರು. ಸಂಬಂಧಿಗಳ ಆಗಮನಕ್ಕಾಗಿ ಸರ್ವೀಸ್​ ರಸ್ತೆ ಬದಿ ಕಾರು ನಿಲ್ಲಿಸಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾಂಕ್ರಿಟ್​ ಮಿಕ್ಸರ್​ ಲಾರಿಯು ಕಾರಿನ ಮೇಲೆ ಬಿದ್ದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕ್ರೇನ್​ ಮೂಲಕ ರಣಾ ಕಾರ್ಯ ನಡೆಸಿ ಕಾರಿನೊಳಗೆ ಸಿಲುಕಿದ್ದ ಇಬ್ಬರನ್ನೂ ರಸಲಾಗಿದೆ. ಸ್ಥಳಕ್ಕೆ ಡಿಸಿಪಿ ನಿರಂಜನರಾಜ್​ ಅರಸ್​, ಶಾಸಕ ಆಸೀಫ್​ ಸೇಠ್​ ಭೇಟಿ ನೀಡಿ ಪರಿಶೀಲಿಸಿದರು. ಎಪಿಎಂಸಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net