ಕಾರ್ ಮೇಲೆ ಬಿದ್ದ ಪೊಲೀಸ್ ಚೌಕಿ

05-09-Shiva-2
ರಾಯಚೂರಿನ ಜಿಲ್ಲಾಕಾರಿ ಕಚೇರಿ ಮುಂಭಾಗದ ರಸ್ತೆಯಲ್ಲಿನ ಪೊಲೀಸ್ ಚೌಕಿ ಲಾರಿ ಡಿಕ್ಕಿ ಹೊಡೆದು ಮಂಗಳವಾರ ಬಿದ್ದಿರುವುದು.
Published on

ರಾಯಚೂರು: ನಗರದ ಜಿಲ್ಲಾಕಾರಿ ಕಚೇರಿ ಮುಂಭಾಗದಲ್ಲಿನ ರಸ್ತೆ ಮಧ್ಯಭಾಗದಲ್ಲಿನ ಪೊಲೀಸ್ ಚೌಕಿ ಕಾರ್ ಮೇಲೆ ಬಿದ್ದು ಕಾರ್‌ಗೆ ಹಾನಿ ಹಾಗೂ ಚಾಲಕನಿಗೆ ಗಾಯಗಳಾದ ಘಟನೆ ಮಂಗಳವಾರ ಜರುಗಿದೆ.
ಆಂಧ್ರದ ನೋಂದಣಿ ಹೊಂದಿರುವ ಸರಕು ತುಂಬಿದ ಲಾರಿ ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯಿಂದಾಗ ರಸ್ತೆಯಲ್ಲಿ ಹೋಗುತ್ತಿದ್ದ ಕಾರ್ ಮೇಲೆ ಕಬ್ಬಿಣದ ಚೌಕಿ ಬಿದ್ದಿದೆ. ಇದರಿಂದಾಗಿ ಕಾರಿನ ಗಾಜು ಒಡೆದು ಹಾನಿಗೊಳಗಾಗಿದ್ದು, ಕಾರ್ ಚಲಾಯಿಸುತ್ತಿದ್ದ ಎಲ್‌ವಿಡಿ ಕಾಲೇಜು ಪ್ರಾಚಾರ್ಯ ಅಮರೇಶಪ್ಪಗೆ ಸಣ್ಣಪುಟ್ಟ ಗಾಯಗಳಾಗಿವೆ.
ಲಾರಿ ಚಾಲಕ ಲಾರಿ ನಿಲ್ಲಿಸದೆ ಹೋಗಿದ್ದು, ಸ್ಥಳೀಯರು ಕಾರ್ ಮೇಲೆ ಬಿದ್ದಿದ್ದ ಪೊಲೀಸ್ ಚೌಕಿಯನ್ನು ತೆಗೆದು ಸಂಚಾರಕ್ಕೆ ಅನುಕೂಲ ಕಲ್ಪಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಭಾರಿ ವಾಹನಗಳ ಓಡಾಟದಿಂದ ಜನರಿಗೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಭಾರಿ ವಾಹನಗಳ ಓಡಾಟ ತಡೆಯುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net