ಕಾರ್ ನಿಲುಗಡೆ ಸ್ಥಳ ಒದಗಿಸಿ

19ydg03
Published on

ಯಾದಗಿರಿ: ನಗರದಲ್ಲಿ ಲಘುವಾಹನ ನಿಲುಗಡೆ ಸ್ಥಳ ಒದಗಿಸಿಕೊಡುವಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಗಿರಿನಾಡು ಕಾರು ಚಾಲಕರ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಯಾದಗಿರಿ ಜಿಲ್ಲೆಯಾಗಿ 14 ವರ್ಷ ಕಳೆದರೂ ಇದುವರೆಗೆ ಲಘುವಾಹನ ಚಾಲಕರಿಗೆ ಒಂದು ಟ್ಯಾಕ್ಸಿಸ್ಟ್ಯಾಂಡ್ ಒದಗಿಸುವಲ್ಲಿ ನಗರಸಭೆ ಮತ್ತು ಜಿಲ್ಲಾಡಳಿತ ವಿಫಲವಾಗಿದೆ. ಇಂದಿಗೂ ಬಾಡಿಗೆ ಆಧಾರದ ಮೇಲೆ ಸಿಗುವ ಕಾರ್ಗಳು ರಸ್ತೆ ಬದಿಯಲ್ಲಿಯೇ ನಿಲ್ಲಿಸುವಂತಾಗಿದೆ. ರಾಜ್ಯದಲ್ಲಿ ತೆರಿಗೆ ಕಟ್ಟುವಲ್ಲಿ ಚಾಲಕರು ಮತ್ತು ಮಾಲೀಕರು ಮೊದಲ ಸ್ಥಾನದಲ್ಲಿದ್ದಾರೆ. ತೆರಿಗೆ ಪಾವತಿಸಿದ ನಂತರವೇ ವಾಹನವನ್ನು ರಸ್ತೆಗೆ ಇಳಿಸಲಾಗುತ್ತದೆ. ವಿಮೆ ಪಾವತಿ ಮಾಡಿದ ಮೇಲೆಯೇ ವಾಹನ ಬಳಕೆಗೆ ಆರಂಭವಾಗುತ್ತದೆ ಎಂದು ಚಾಲಕರು ಮನವರಿಕೆ ಮಾಡಿದರು.

ಸಕರ್ಾರದ ಎಲ್ಲ ನಿಯಮಗಳನ್ನು ಪಾಲಿಸಿ ಮುಂಗಡವಾಗಿಯೇ ತೆರಿಗೆ ಪಾವತಿಸುವ ಇಂತಹ ವಾಹನ ಮಾಲೀಕರು ಮತ್ತು ಚಾಲಕರುಗಳಿಗೆ ಸೌಲತ್ತು ನೀಡುವಲ್ಲಿ ಜಿಲ್ಲಾಡಳಿತಕ್ಕೆ ಇದುವರೆಗೆ ಸಾಧ್ಯವಾಗಿಲ್ಲ. ಅದರಲ್ಲೂ ವಿಶೇಷವಾಗಿ ಜಿಲ್ಲೆಯಾದ ನಂತರ ಹೊರಗಿನವರೇ ಸಚಿವರಾಗಿದ್ದು ಅವರ ನಿರ್ಲಕ್ಷ್ಯ ತಾಳಿದ್ದರಿಂದ ಕೆಲಸ ಆಗಿಲ್ಲ. ಈಗ ಸ್ವತಃ ಜಿಲ್ಲೆಯವರೇ ಸಚಿವರಾದ ಕಾರಣ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ದರ್ಶನಾಪುರ, ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net