

ಹುಬ್ಬಳ್ಳಿ: ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಮೃತದೇಹವನ್ನು ಶಹರ ಠಾಣೆ ಪೊಲೀಸರು ಶುಕ್ರವಾರ ಕಾರಿನ ಡಿಕ್ಕಿಯಲ್ಲಿಟ್ಟು ಡಿಕ್ಕಿ ಓಪನ್ ಮಾಡಿಕೊಂಡು ಕಿಮ್ಸ್ಗೆ ರವಾನಿಸಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ವಾಸಿಂ ಅಕ್ರಂ (22) ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿ. ಅತಿಯಾಗಿ ಸಾಲ ಮಾಡಿಕೊಂಡಿದ್ದ ವಾಸಿಂ ಸಾಲ ತೀರಿಸಲಾಗದೇ ನೊಂದಿದ್ದ. ಮದ್ಯ ಸೇವಿಸಿ, ಜೆಸಿ ನಗರದ ಅಜಂತಾ ಲಾಡ್ಜ್ನ ರೂಮ್ಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ. ವಿಷಯ ತಿಳಿದು ಧಾವಿಸಿದ ಶಹರ ಠಾಣೆ ಸಿಬ್ಬಂದಿ, ಆತನ ಮೃತದೇಹವನ್ನು ಸ್ವಿಫ್ಟ್ ಡಿಸೈರ್ ಕಾರ್ನ ಡಿಕ್ಕಿಯಲ್ಲಿ ಹಾಕಿಕೊಂಡು ಕಿಮ್್ಸ ಶವಾಗಾರಕ್ಕೆ ರವಾನಿಸಿದ್ದರು. ಹಾಗೆ ಮಾಡಬಾರದಿತ್ತು, ಆಂಬುಲೆನ್ಸ್ನಲ್ಲಿ ಸಾಗಿಸಬಹುದಿತ್ತು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ತಕ್ಷಣದಲ್ಲಿ ಆಂಬುಲೆನ್ಸ್ ಲಭ್ಯವಿರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.