ಕಾರೇಘಟ್ಟ ದೇವಸ್ಥಾನದಲ್ಲಿ ಲಿಂಗ ಪ್ರತಿಷ್ಠಾಪನೆ

klb3
ಸೇಡA ತಾಲೂಕಿನ ಕೊಂತನಪಲ್ಲಿ ಬೆಟ್ಟದಲ್ಲಿರುವ ಕಾರೇಘಟ್ಟ ಸಿz್ದೆÃಶ್ವರ ದೇವಾಲಯದಲ್ಲಿ ಶ್ರೀ ಸದಾಶಿವ ಸ್ವಾಮೀಜಿ ವಿಧಿ ವಿಧಾನಗಳ ಮೂಲಕ ಶ್ರಾವಣದ ಮೊದಲ ಸೋಮವಾರ ಲಿಂಗ ಪ್ರತಿಷ್ಠಾಪನೆ ಮಾಡಿದರು.
Published on

ಸೇಡಂ: ಕೊಂತನಪಲ್ಲಿ ಬೆಟ್ಟದಲ್ಲಿರುವ ಕಾರೇಘಟ್ಟ ಸಿz್ದÉÃಶ್ವರ ದೇವಾಲಯದಲ್ಲಿ ಕೊತ್ತಲ ಬಸವೇಶ್ವರ ದೇವಸ್ಥಾನದ ಶ್ರೀ ಸದಾಶಿವ ಸ್ವಾಮೀಜಿ ಧಾರ್ಮಿಕ ವಿಧಿ ವಿಧಾನ ಮೂಲಕ ಶ್ರಾವಣ ಮಾಸದ ಮೊದಲ ಸೋಮವಾರ ಲಿಂಗ ಪ್ರತಿಷ್ಠಾಪನೆ ಮಾಡಿದರು.

ಕಾರೇಘಟ್ಟ ಸಿz್ದÉÃಶ್ವರ ಬೆಟ್ಟ ಪವಿತ್ರ ಸ್ಥಳ. ಮುಖ್ಯ ರಸ್ತೆಯಿಂದ ದೂರವಿರುವ ದೇಗುಲಕ್ಕೆ ಭಕ್ತರು ಹೋಗಿ ಬರಲು ದಾರಿ ಸಮಸ್ಯೆ ಇದೆ. ಈ ವಿಷಯವನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಗಮನಕ್ಕೆ ತಂದಿದ್ದು, ರಸ್ತೆ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಶ್ರೀಗಳು ತಿಳಿಸಿದರು.

ಕೆಲ ತಿಂಗಳ ಹಿಂದೆ ದೇವಾಲಯದಲ್ಲಿ ನಿಧಿ ಇದೆ ಎಂದು ಭಾವಿಸಿದ ಕೆಲವರು ನೆಲ ಅಗೆದು ಲಿಂಗವನ್ನು ವಿರೂಪಗೊಳಿಸಿದ್ದರು. ಈ ರೀತಿ ಕೆಲವರು ನಿಧಿಯಾಸೆಗೆ ದೇಗುಲಗಳನ್ನು ಅಗೆಯುವುದು, ಧ್ವಂಸ ಮಾಡುವುದು ಸರಿಯಲ್ಲ. ದೇವಾಲಯಕ್ಕೆ ಶ್ರದ್ಧೆ ಭಕ್ತಿಯಿಂದ ಬಂದು ಭಗವಂತನ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು. ಸರಿಯಾದ ದಾರಿಯಲ್ಲಿ ಸಾಗಿದಾಗಲೇ ಭಗವಂತ ನಮ್ಮನ್ನು ಕಾಪಾಡುತ್ತಾನೆ. ದೇವಾಲಯದಲ್ಲಿ ಲಿಂಗ ವಿರೂಪಗೊಂಡಿದ್ದನ್ನು ಅರಿತು ಕಿಷ್ಟಾರೆಡ್ಡಿ ತಿಮ್ಮಾಪುರ ಕುಟುಂಬ ಹೊಸ ಲಿಂಗ ಸ್ಥಾಪನೆಗೆ ಮುಂದಾಗಿರುವುದನ್ನು ಶ್ಲಾಘಿಸಿದರು.
ಪ್ರಮುಖರಾದ ಕಿಷ್ಟಾರೆಡ್ಡಿ ತಿಮ್ಮಾಪುರ, ಮುರಳೀಧರರೆಡ್ಡಿ ಕೊಂತನಪಲ್ಲಿ, ನಾಗೇಶರೆಡ್ಡಿ ಜಹೀರಾಬಾದ್, ಜಗನ್ನಾಥರೆಡ್ಡಿ ತಿಮ್ಮಾಪುರ, ಅವಿನಾಶರೆಡ್ಡಿ ತಿಮ್ಮಾಪುರ, ಲಕ್ಷö್ಮಪ್ಪ ಮಾಸ್ಟರ, ಭೀಮಶಪ್ಪ ಗಡ್ಡಾಮೀದಿ, ರವೀಂದ್ರ ಗಣಾಪುರ, ನರಸಪ್ಪ ಪೂನಾ, ಮಾಣಿಕಪ್ಪ ಪೆದ್ದಿಂಟಿ, ಶರಣಪ್ಪ ಮಾಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net