ಕಾರು ಹಾಯ್ದು ಒಬ್ಬನ ಸಾವು, ನಾಲ್ವರಿಗೆ ಗಾಯ

bus accident
Published on

ಹುಮನಾಬಾದ್: ಮಾಣಿಕನಗರ ಸೇತುವೆ ಬಳಿ ಭಾನುವಾರ ಸಂಜೆ ವಾಕಿಂಗ್ ಮಾಡುತ್ತಿದ್ದವರ ಮೇಲೆ ಕಾರು ಹಾಯ್ದಿದೆ. ಒಬ್ಬ ಮೃತಪಟ್ಟರೆ, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಶಿವಾನಗರ ಬಡಾವಣೆ ನಿವಾಸಿ ಅಪ್ಪಾರಾವ ಬಿರಾದಾರ (61) ಚಿಕಿತ್ಸೆ ಫಲಿಸದೆ ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆ, ಗಾಯಗೊಂಡಿರುವ ಶ್ರೀನಿವಾಸ ಕುಲಕರ್ಣಿ ಮಾಣಿಕನಗರ, ವೀರಣ್ಣ ನೇಳಗಿ, ವಿಠ್ಠಲರಾವ ಪೂಜಾರಿ, ಚಂದ್ರಪ್ಪ ಅವರನ್ನು ಬೀದರ್ ಹಾಗೂ ಕಲಬುರಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕಾರು ಚಾಲಕ ಪರಾರಿಯಾಗಿದ್ದಾನೆ. ಸಿಪಿಐ ಜೆ.ಎಸ್. ನ್ಯಾಮಗೌಡರ, ಪಿಎಸ್ಐ ಸುಜಾತ ಕುನಾಳೆ, ಸಿಬ್ಬಂದಿ ರಾಜೇಂದ್ರ, ಗೌತಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net