ಕಾರು ಮತ್ತು ಬೈಕ್ ನಡುವೆ ಅಪಘಾತ!

ಕಾರು ಮತ್ತು ಬೈಕ್ ನಡುವೆ ಅಪಘಾತ!
Published on

ಚನ್ನರಾಯಪಟ್ಟಣ: ಕಾರು ಮತ್ತು ಬೈಕ್ ನಡುವೆ ಅಪಘಾತ ನಡೆದು, ಒಬ್ಬ ವ್ಯಕ್ತಿ ಮೃತಪಟ್ಟು, ಇಬ್ಬರು ಮಕ್ಕಳು ಮತ್ತು ಮಹಿಳೆ ಗಾಯಗೊಡಿರುವ ಘಟನೆ ಹಿರೀಸಾವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.

 ತಾಲೂಕಿನ ತೊಟಿ ಗ್ರಾಮದ ಸುನಿಲ್ (35) ಮೃತ ವ್ಯಕ್ತಿ. ಇತನ ಪತ್ನಿ ದಿವ್ಯಾ, ಮಕ್ಕಳಾದ  ಅಜಿತ್ ಗೌಡ, ವರ್ಣಿತಾ ತೀವ್ರವಾಗಿ ಗಾಯಗೊಂಡಿದ್ದಾರೆ.

  ಮೃತ ವ್ಯಕ್ತಿಯ ಕುಟುಂಬದವರು ಬೈಕ್ ನಲ್ಲಿ ಬೆಳಗೀಹಳ್ಳಿಕಡೆಯಿಂದ ನುಗ್ಗೇಹಳ್ಳಿ–ಹಿರೀಸಾವೆ ರಸ್ತೆ ಬರುವಾಗ, ನುಗ್ಗೇಹಳ್ಳಿ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ತಲೆ ಮತ್ತು ಕೈಕಾಲುಗಳಿಗೆ ಪೆಟ್ಟು ಬಿದಿದ್ದ ಇವರನ್ನು ಹಿರೀಸಾವೆ ಆಸ್ಪತ್ರೆಗೆ ಸಾಗಿಸಿ, ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಸಾಗಿಸುವಾಗ ಮಾರ್ಗ ಮಧ್ಯೆ ಒಬ್ಬರು ಮೃತಪಟ್ಟಿದ್ದಾರೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net